ಬೇಸಿಗೆಯಲ್ಲಿ ಕೂದಲಿನ ಸೌಂದರ್ಯ ಕಾಪಾಡಲು ಇವುಗಳನ್ನು ಬಳಸಿ

ಶನಿವಾರ, 13 ಏಪ್ರಿಲ್ 2019 (10:13 IST)
ಬೆಂಗಳೂರು : ಸುಡುವ ಬೇಸಿಗೆಯಲ್ಲಿ ಚರ್ಮದ ಜೊತೆಗೆ ಕೂದಲಿನ ಆರೈಕೆಯು ಬಹಳ ಮುಖ್ಯ. ಬೆವರು, ಧೂಳಿನಿಂದ ಕೂದಲಿನ ಅಂದ ಕೆಡುತ್ತದೆ. ಅಲ್ಲದೇ ಕೂದಲು ಉದುರುವ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಮನೆ ಮದ್ದು ಬಳಸಿ ಕೂದಲಿನ ಸೌಂದರ್ಯ ಕಾಪಾಡಿಕೊಳ್ಳಿ.


ಸಾಸಿವೆ ಎಣ್ಣೆ : ಶಾಂಪೂ, ಕಂಡೀಷನರ್ ಬಳಸುವ ಅರ್ಧ ಗಂಟೆ ಮೊದಲು ಸಾಸಿವೆ ಎಣ್ಣೆಯನ್ನು ಹಾಕಿ ಮಸಾಜ್ ಮಾಡಿಕೊಳ್ಳಿ. ಇದರಿಂದ ಕೂದಲು ಶುಷ್ಕವಾಗದೆ ಹೊಳಪು ಪಡೆಯುತ್ತದೆ.


ಮೆಹಂದಿ : ಎಣ್ಣೆಯುಕ್ತ ಕೂದಲು ಹೊಂದಿದವರಿಗೆ ಮೆಹಂದಿ ಬೆಸ್ಟ್. ಮೆಹಂದಿ ಪುಡಿಗೆ ಒಂದು ಚಮಚ ಮೊಸರು, ನೀರು ಸೇರಿಸಿ ಪೇಸ್ಟ್ ಮಾಡಿ ಅದನ್ನು ಕೂದಲಿಗೆ ಹಚ್ಚಿಕೊಳ್ಳಿ. 15 ನಿಮಿಷದ ನಂತ್ರ ಕೂದಲನ್ನು ಸ್ವಚ್ಛವಾಗಿ ತೊಳೆಯಿರಿ. ಇದರಿಂದ ಕೂದಲಿಗೆ ಪ್ರಾಕೃತಿಕ ಬಣ್ಣ ಬರುವ ಜೊತೆಗೆ ಎಣ್ಣೆ ಸಮಸ್ಯೆ ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 
          

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ