ಚಳಿಗಾಲದಲ್ಲಿ ಸ್ಕೀನ್ ಡ್ರೈಯಾಗುವುದನ್ನು ತಡೆಯಲು ಈ ಫೇಸ್ ಪ್ಯಾಕ್ ಹಚ್ಚಿ
ಗುರುವಾರ, 27 ಡಿಸೆಂಬರ್ 2018 (09:29 IST)
ಬೆಂಗಳೂರು : ಚಳಿಗಾಲದಲ್ಲಿ ಹೆಚ್ಚಿನವರ ಸ್ಕೀನ್ ಡ್ರೈಯಾಗುತ್ತದೆ. ಇದರಿಂದ ಸ್ಕೀನ್ ಹಾಳಾಗುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಸ್ಕೀನ್ ಡ್ರೈಯಾಗುವುದನ್ನು ತಡೆದು ಸೌಂದರ್ಯವನ್ನು ಕಾಪಾಡಲು ಈ ಫೇಸ್ ಪ್ಯಾಕ್ ಬಳಸಿ.
ಬಾಳೆಹಣ್ಣಿನ ಪೇಸ್ಟ್ 1 ಟೇಬಲ್ ಸ್ಪೂನ್, ಜೇನುತುಪ್ಪ ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಇದರಿಂದ ಮುಖ ಚಳಿಗಾಲದಲ್ಲಿ ತುಂಬಾ ಡ್ರೈಯಾಗುವುದು ಕಡಿಮೆಯಾಗುತ್ತದೆ.
ಬಾಳೆಹಣ್ಣಿನ ಪೇಸ್ಟ್ 1 ಟೇಬಲ್ ಸ್ಪೂನ್, ಹಾಲು ಅಥವಾ ಕೊಬ್ಬರಿ ಎಣ್ಣೆ 1 ಟೇಬಲ್ ಸ್ಪೂನ್ ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ½ ಗಂಟೆ ಬಿಟ್ಟು ಉಗುರುಬೆಚ್ಚಗಿನ ನೀರಲ್ಲಿ ತೊಳೆಯಿರಿ.
ಹಾಲು ಹಾಗೂ ಜೇನುತುಪ್ಪ ಎರಡನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಇದು ಚೆನ್ನಾಗಿ ಕೆಲಸಮಾಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.