ಚಳಿಗಾಲದಲ್ಲಿ ಕೂದಲು ಸಿಲ್ಕಿ ಮತ್ತು ಶೈನಿಯಾಗಿರಲು ಈ ಹೇರ್ ಪ್ಯಾಕ್ ಬಳಸಿ

ಶನಿವಾರ, 19 ಡಿಸೆಂಬರ್ 2020 (06:38 IST)
ಬೆಂಗಳೂರು : ಹೆಚ್ಚಾಗಿ ಚಳಿಗಾಲದಲ್ಲಿ ಚರ್ಮದ ಜೊತೆಗೆ ಕೂದಲು ಕೂಡ ತೇವಾಂಶ ಕಳೆದುಕೊಳ್ಳುತ್ತದೆ. ಇದರಿಂದ ಕೂದಲಿಗೆ ಹಾನಿಯಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಚಳಿಗಾಲದಲ್ಲಿ ಕೂದಲು ಸಿಲ್ಕಿ ಮತ್ತು ಶೈನಿಯಾಗಿರಲು ಈ ಹೇರ್ ಪ್ಯಾಕ್ ಬಳಸಿ.

ತೆಂಗಿನೆಣ್ನೆ ಹಾಗೂ ಮೊಸರು ಕೂದಲು ಹಾಗೂ ಚರ್ಮದ ತೇವಾಂಶವನ್ನು ಲಾಕ್ ಮಾಡಲು ಬಹಳ ಉಪಯೋಗಕಾರಿ. ಹಾಗಾಗಿ ತೆಂಗಿನೆಣ್ಣೆ ಮತ್ತು ಮೊಸರನ್ನು ಒಂದು ಪಾತ್ರೆಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ 2 ವಿಟಮಿನ್ ಇ ಕ್ಯಾಪ್ಸುಲ್ ಮಿಕ್ಸ್ ಮಾಡಿ. ಇದನ್ನು ಕೂದಲಿಗೆ ಹಚ್ಚಿ ಸುಮಾರು 40 ನಿಮಿಷಗಳ ಬಳಿಕ ಕೂದಲನ್ನು ವಾಶ್ ಮಾಡಿ. ಬಳಿಕ ಕೂದಲಿನಲ್ಲಾದ ಬದಲಾವಣೆಯನ್ನು ನೀವೇ ಗಮನಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ