ಆಲ್ಕೊಹಾಲ್ ನಿಂದಾಗುವ ಆರೋಗ್ಯ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ
ಸೋಮವಾರ, 12 ಅಕ್ಟೋಬರ್ 2020 (11:33 IST)
ಬೆಂಗಳೂರು : ಕೆಲವರು ಆಲ್ಕೊಹಾಲ್ ಸೇವಿಸುವ ಚಟವನ್ನು ಹೊಂದಿರುತ್ತಾರೆ. ಇದರಿಂದ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆಲ್ಕೊಹಾಲ್ ನಿಂದಾಗುವ ಆರೋಗ್ಯ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.
ನೀವು ಆಲ್ಕೋಹಾಲ್ ಸೇವಿಸುವುದರಿಂದ ದೇಹದ ಪೊಟ್ಯಾಸಿಯಂ, ಸೋಡಿಯಂ, ಮೆಗ್ನಿಸಿಯಂ, ಫಾಸ್ಪರಸ್, ಮತ್ತು ಕ್ಯಾಲ್ಸಿಯಂ ಕಡಿಮೆಯಾಗುತ್ತದೆ. ಇವುಗಳನ್ನು ಮರಳಿ ಪಡೆಯಲು ಬಾಳೆಹಣ್ಣು ಹಾಗೂ ತೆಂಗಿನಕಾಯಿ ನೀರನ್ನು ಸೇವಿಸಬೇಕು.