ಬೇಸಿಗೆಯಲ್ಲಿ ತುಟಿಗಳನ್ನು ಹೈಡ್ರೇಟ್ ಮಾಡಲು ಈ ಮನೆಮದ್ದನ್ನು ಹಚ್ಚಿ
ಶನಿವಾರ, 13 ಮಾರ್ಚ್ 2021 (06:38 IST)
ಬೆಂಗಳೂರು : ಬೇಸಿಗೆಯಲ್ಲಿ ನೀರು ಸರಿಯಾಗಿ ಸೇವಿಸದಿದ್ದಾಗ ತುಟಿಗಳು ಡ್ರೈ ಆಗುತ್ತಿರುತ್ತದೆ. ಇದರಿಂದ ತುಟಿಗಳಲ್ಲಿ ಬಿರುಕು ಬಿಟ್ಟು ಗಾಯವಾಗುತ್ತದೆ. ಹೀಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.
ತುಟಿಗಳಿಗೆ ಮನೆಯಲ್ಲಿಯೇ ತಯಾರಿಸಿದ ಈ ಮುಲಾಮನ್ನು ಹಚ್ಚಿ ಹೈಡ್ರೇಟ್ ಮಾಡಿ. ಇದರಿಂದ ತುಟಿ ಬಿರುಕು ಬಿಡುವುದು, ಊದಿಕೊಳ್ಳುವುದು ಕಡಿಮೆಯಾಗುತ್ತದೆ. ಅದಕ್ಕಾಗಿ ನಿಂಬೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ. ಅದರಲ್ಲಿ 1 ಚಮಚ ಪುಡಿ ತೆಗೆದುಕೊಂಡು ಅದಕ್ಕೆ ಕ್ಕರೆ ಮತ್ತು 1 ಚಮಚ ಬಾದಾಮಿ ಎಣ್ಣೆ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಫ್ರಿಜ್ ನಲ್ಲಿಟ್ಟು ತುಟಿಗೆ ಹಚ್ಚಿ.