ವೈರಸ್ ಸೋಂಕುಗಳಿಂದ ನಮ್ಮ ದೇಹವನ್ನು ರಕ್ಷಿಸಿಕೊಳ್ಳಲು ಈ ಮನೆಮದ್ದನ್ನು ಬಳಸಿ
ಬುಧವಾರ, 5 ಆಗಸ್ಟ್ 2020 (08:43 IST)
ಬೆಂಗಳೂರು : ಮಳೆಗಾಲದಲ್ಲಿ ಹಲವು ಬಗೆಯ ವೈರಸ್ ಗಳು ನಮ್ಮ ಮೇಲೆ ದಾಳಿ ಮಾಡುತ್ತವೆ. ಇವುಗಳಿಂದ ರಕ್ಷಿಸಿಕೊಳ್ಳಲು ನಾವು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಅದಕ್ಕೆ ಈ ಮನೆಮದ್ದನ್ನು ಸೇವಿಸಿ.
10 ಕರಿಬೇವಿನ ಎಲೆಗಳು, 10 ಕಹಿಬೇವಿನ ಎಲೆಗಳು, ½ ಚಮಚ ಅರಿಶಿನ ಪುಡಿ, 4-5 ಕಾಳುಮೆಣಸು, 2 ಚಮಚ ಕೊಬ್ಬರಿ ಎಣ್ಣೆ, 1 ಎಸಳು ಬೆಳ್ಳುಳ್ಳಿ, 10 ತುಳಸಿ ಎಲೆ ಜಜ್ಜಿ ಉಂಡೆ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಎಲ್ಲ ರೀತಿಯ ವೈರಸ್ ಸೋಂಕುಗಳಿಂದ ನಮ್ಮ ದೇಹವನ್ನು ರಕ್ಷಿಸಿಕೊಳ್ಳಲು ಬೇಕಾದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದನ್ನು 15 ದಿನಗಳ ಕಾಲ ಸತತವಾಗಿ ಮಾಡಬೇಕು.