ಬೆಂಗಳೂರು: ಬೆಳಿಗ್ಗೆ ಮನೆಯಲ್ಲಿ ಯಾವುದೋ ಕಾರ್ಯಕ್ರಮ, ಮದುವೆ , ಫ್ರೆಂಡ್ಸ್ ಗಳ ಪಾರ್ಟಿ ಹೀಗೆ ಏನೋ ಇರುತ್ತದೆ. ಧುತ್ತೆಂದು ನಿಮ್ಮ ಮುಖದಲ್ಲಿ ಒಂದು ಮೊಡವೆ ಗುಳ್ಳೆ ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ದೊಡ್ಡ ತಲೆನೋವು ನೀಡುತ್ತದೆ. ಸರಿಯಾದ ಆರೈಕೆಯ ಮೂಲಕ ಮುಖದಲ್ಲಿರುವ ಮೊಡವೆಯನ್ನು ನಾವು ನಿವಾರಿಸಿಕೊಳ್ಳಬಹುದು. ಈ ಮೂರು ಟಿಪ್ಸ್ ಅನುಸರಿಸಿ ನಿಮ್ಮ ಮುಖದ ಮೇಲಿರುವ ಮೊಡವೆಗೆ ಗುಡ್ ಬೈ ಹೇಳಿ.
* ಟೀ ಟ್ರೀ ಆಯಿಲ್ ಹಾಗೂ ಅಲೋವೆರ ಜೆಲ್: ಟೀ ಟ್ರೀ ಆಯಿಲ್ ನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಹಾಗೂ ಆಂಟಿ ಫಂಗಲ್ ಗುಣಗಳಿವೆ. ಇದು ಮೊಡವೆಯಿಂದಾಗುವ ಚರ್ಮದ ುರಿಯೂತವನ್ನು ಕಡಿಮೆಮಾಡುತ್ತದೆ. ಇನ್ನು ಅಲೋವೆರಾ ಜೆಲ್ ಹೊಸ ಚರ್ಮದ ಬೆಳವಣಿಗೆಗೆ ಸಹಾಯಮಾಡುತ್ತದೆ. ಟೀ ಟ್ರೀ ಆಯಿಲ್ ಹಾಗೂ ಆಲೋವೆರ ಜೆಲ್ ನ ಮಿಶ್ರಣವು ಬ್ಯಾಕ್ಟರಿಯಾದ ನಿವಾರಣೆಯಲ್ಲಿ ಡಬ್ಬಲ್ ಎಜೆಂಟ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಮೊದಲು ನಿಮ್ಮ ಮುಖವನ್ನು ಆಂಟಿ ಪಿಂಪಲ್ ಪೇಸ್ ವಾಶ್ ನಿಂದ ತೊಳೆಯಿರಿ ನಂತರ ಒಂದು ಹತ್ತಿ ತುಂಡನನ್ನು ತೆಗೆದುಕೊಂಡು ಈ ಅಲೋವೆರಾ ಹಾಗೂ ಟೀ ಟ್ರೀ ಆಯಿಲ್ ನ ಮಿಶ್ರಣವನ್ನು ಹಚ್ಚಿಕೊಳ್ಳಿ. ಎರಡು ಗಂಟೆಗಳಿಗೊಮ್ಮೆ ಹೀಗೆ ಮಾಡಿ.
* ಟೂತ್ ಪೇಸ್ಟ್ ಕೂಡ ಮೊಡವೆಯ ನಿವಾರಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಮೊದಲು ಮುಖವನ್ನು ಆಂಟಿ ಪಿಂಪಲ್ ಪೇಸ್ ವಾಶ್ ನಿಂದ ತೊಳೆದು ನಂತರ ಮೊಡವೆ ಎದ್ದ ಜಾಗದಲ್ಲಿ ಈ ಟೂತ್ ಪೇಸ್ಟ್ ಹಾಕಿ ರಾತ್ರಿಯಿಡೀ ಹಾಗೇ ಬಿಡಿ ಬೆಳಿಗ್ಗೆ ಎದ್ದು ತೊಳೆಯಿರಿ.
*ಕನ್ಸಿಲರ್ ಕೂಡ ನಿಮ್ಮ ಮೊಡವೆಯ ನಿವಾರಣೆಗೆ ಉತ್ತಮವಾದ ಟಿಪ್ಸ್ ಆಗಿದೆ. ಸ್ವಲ್ಪ ಕನ್ಸಿಲರ್ ತೆಗೆದುಕೊಂಡು ಮೊಡವೆಗೆ ಹಚ್ಚಿಕೊಳ್ಳಿ ಇದು ಮೊಡವೆಯ ರೆಡ್ ನೆಸ್ ಅನ್ನು ಮರೆಮಾಚುತ್ತದೆ.