ಗೊರಕೆ ಹೊಡೆಯುವುದನ್ನು ತಪ್ಪಿಸಲು ಏನು ಮಾಡಬೇಕು?
ಹೆಚ್ಚಾಗಿ ಅಂಗಾತ ಮಲಗುವುದರಿಂದ ಗೊರಕೆ ಹೊಡೆಯುತ್ತಾರೆ. ಹಾಗಾಗಿ ಅಂಗಾತ ಮಲಗುವ ಬದಲು ಒಂದು ಬದಿಗೆ ಮಲಗುವ ಅಭ್ಯಾಸ ಮಾಡಿ. ಮದ್ಯಪಾನ, ಕಫೈನ್ ಅಂಶದ ಆಹಾರ ಸೇವನೆಗೂ ಗುಡ್ ಬೈ ಹೇಳಿ.
ರಾತ್ರಿ ಅತಿಯಾಗಿ ಊಟ ಮಾಡುವುದು ಮಾಡಿದರೆ ಗೊರಕೆ ಬರುವ ಛಾನ್ಸ್ ಇದೆ. ಹಾಗಾಗಿ ರಾತ್ರಿ ಹಗುರವಾದ ಭೋಜನ ಮಾಡಿ. ಆದಷ್ಟು ರಾತ್ರಿ ಮಲಗುವ ಎರಡು ಗಂಟೆಗಳ ಮೊದಲು ಊಟ ಮಾಡಿ. ಇದರಿಂದ ಗೊರಕೆ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು.