ಬಹುರಾಷ್ಟ್ರೀಯ ಪ್ರಖ್ಯಾತಿಯನ್ನು ಹೊಂದಿರುವ, ಹೆಂಗಳೆಯರ ಅಚ್ಚುಮೆಚ್ಚಿನ ಆಲಿವ್ ಎಣ್ಣೆಯು ಕೇವಲ ಅಡುಗೆಗಷ್ಟೇ ಅಲ್ಲದೇ ಚರ್ಮ ಮತ್ತು ಕೇಶದ ಆರೋಗ್ಯದಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮೆಡಿಟರೇನಿಯನ್ ಪ್ರದೇಶಗಳಲ್ಲಿ ಬೆಳೆಯುವ ಆಲಿವ್ ಮರದಲ್ಲಾಗುವ ಹಣ್ಣನ್ನು ಹಿಂಡಿ ಆಲಿವ್ ಎಣ್ಣೆಯನ್ನು ಉತ್ಪಾದಿಸಲಾಗುತ್ತದೆ.
- ಆಲಿವ್ ಎಣ್ಣೆಯು ಕೊಬ್ಬಿನಂಶವನ್ನು ಕಡಿಮೆಗೊಳಿಸುವುದಲ್ಲದೇ ದೇಹದಲ್ಲಿರುವ ಕೊಲೆಸ್ಟರೋಲ್ ಆಕ್ಸಿಡೇಟಿವ್ ಪರಿಣಾಮವನ್ನು ಕಡಿಮೆಗೊಳಿಸುತ್ತದೆ. ಇದರಿಂದ ಹೃದಯಕ್ಕೆ ಆಗಬಹುದಾದ ತೊಂದರೆಯು ಕಡಿಮೆಯಾಗುತ್ತದೆ.
- ಎಳೆ ಮಗುವಿಗೆ ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿದರೆ ಮಗುವಿನ ಚರ್ಮವು ಮೃದು ಮತ್ತು ನಯವಾಗುತ್ತದೆ.
- ಆಲಿವ್ ಎಣ್ಣೆಯನ್ನು ಸೇವಿಸುವುದರಿಂದ ಸ್ಟ್ರೋಕ್‌ನ ಸಾಧ್ಯತೆಗಳು ಕಡಿಮೆಯಾಗುತ್ತದೆ.
- ಎಳೆಯ ಮಗು ಮಲಬದ್ಧತೆಯಿಂದ ಬಳಲುತ್ತಿದ್ದರೆ ಆಲಿವ್ ಎಣ್ಣೆಯನ್ನು ಮಗುವಿನ ಹೊಟ್ಟೆಯ ಮೇಲೆ ತಿಕ್ಕಿದರೆ ಮಲಬದ್ಧತೆಯ ಸಮಸ್ಯೆಯು ನಿವಾರಣೆಯಾಗುತ್ತದೆ.
- ಆಲಿವ್ ಎಣ್ಣೆಯಲ್ಲಿರುವ ಒಲಿಯೋಕಂತಲ್ ಎಂಬ ಫೈಟೊನ್ಯೂಟ್ರಿಯೆಂಟ್ ಅಂಶವು ಉರಿಯೂತವನ್ನು ಕಡಿಮೆಗೊಳಿಸಿ ವಿವಿಧ ರೀತಿಯ ಕ್ಯಾನ್ಸರ್ ಆಗುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ.
- ಆಲಿವ್ ಎಣ್ಣೆಯನ್ನು ಪ್ರತಿನಿತ್ಯ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಉತ್ತಮಗೊಳ್ಳುತ್ತದೆ.
- ಆಲಿವ್ ಎಣ್ಣೆಯು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಿ ಇನ್ಸುಲಿನ್ ಶಕ್ತಿಯನ್ನು ವೃದ್ಧಿಸುತ್ತದೆ.
- ಆಲಿವ್ ಎಣ್ಣೆಯಿಂದ ಚರ್ಮದ ಕ್ಯಾನ್ಸರ್ ಸಂಭವಿಸುವ ಸಾಧ್ಯತೆಗಳು ಕಡಿಮೆಯಾಗುತ್ತದೆ. ಇದು ಸೂರ್ಯನ ಕಿರಣಗಳ ವಿರುದ್ಧ ರಕ್ಷಣಾ ಕವಚದಂತೆಯೂ ಸಹಾಯಕವಾಗಿದೆ.
- ಆಲಿವ್ ಎಣ್ಣೆಯನ್ನು ಸೇವಿಸುವುದರಿಂದ ಇದು ಅನಗತ್ಯ ಆಹಾರ ಸೇವನೆಯನ್ನು ತಡೆಗಟ್ಟಿ ತೂಕವನ್ನು ಕಡಿಮೆಗೊಳಿಸುತ್ತದೆ.
- ಆಲಿವ್ ಎಣ್ಣೆಯನ್ನು ಮುಖದ ತ್ವಚೆಗೆ ಬಳಸಿದಾಗ ಪೊಲಿಫೆನೋಲ್ ಎಂಬ ಆಂಟಿ ಆಕ್ಸಿಡೆಂಟ್‌ಗಳು ಬಿಡುಗಡೆಗೊಂಡು ರಕ್ತ ಸಂಚಲನೆಯನ್ನು ಉತ್ತಮಗೊಳಿಸುತ್ತದೆ.
- ಆಲಿವ್ ಎಣ್ಣೆಯಲ್ಲಿರುವ ಒಮೆಗಾ 3 ಮತ್ತು ಒಮೆಗಾ 6 ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಉಪಯುಕ್ತವಾಗಿದೆ.
- 1 ಚಮಚ ನಿಂಬೆಯ ಹಣ್ಣಿನ ರಸವನ್ನು 2 ಚಮಚ ಆಲಿವ್ ಎಣ್ಣೆಯಲ್ಲಿ ಕಲೆಸಿ, ಕೂದಲಿಗೆ ಮಸಾಜ್ ಮಾಡಿ ಒಂದು ಗಂಟೆಯ ನಂತರ ತೊಳೆಯುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.