ಸುಖ ಸಂಸಾರಕ್ಕೆ ಹೆಂಡತಿಯ ಆ ಅಂಗ ಹೇಗಿರಬೇಕು?

ಶುಕ್ರವಾರ, 15 ನವೆಂಬರ್ 2019 (14:01 IST)
ದಾಂಪತ್ಯದಲ್ಲಿ ಎಲ್ರೂ ಸುಖ ಅರಸುವವರೇ. ಸುಖ ದಾಂಪತ್ಯಕ್ಕೆ ಗಂಡ- ಹೆಂಡತಿ ಹೇಗಿರಬೇಕು ಎಂಬ ಚರ್ಚೆ ಆದಿಕಾಲದಿಂದಲೂ ಚಾಲ್ತಿಯಲ್ಲಿದೆ. ಆದರೂ ಸುಖಮಯ ದಾಂಪತ್ಯಕ್ಕೆ ಆಸೆ ಪಡೋರ ಸಂಖ್ಯೆ ಕಡಿಮೆ ಇಲ್ಲ.

ಗಂಡ ಹೆಚ್ಚು ಉದ್ದವಿರಬೇಕು, ಹೆಂಡತಿ ಕುಳ್ಳಗೆ ಇದ್ದರೆ ಸುಖ ದಾಂಪತ್ಯ ಅವರದ್ದಾಗಲಿದೆ. ಗಂಡ ವಿಪರೀತ ಎತ್ತರವಿದ್ದು, ಹೆಂಡತಿ ಕುಳ್ಳಗಿದ್ದರೆ, ಹೆಂಡತಿ ಹ್ಯಾಪಿಯಾಗಿರುತ್ತಾಳೆ.

ಗಂಡನ ಎತ್ತರ, ವ್ಯಕ್ತಿತ್ವ ಎತ್ತರ ಕಡಿಮೆ ಇರುವ ಮಹಿಳೆಯನ್ನು ತೀವ್ರವಾಗಿ ಪ್ರಭಾವಿಸುತ್ತದೆಯಂತೆ. ಉದ್ದ ಇರುವ ಗಂಡಸರತ್ತ ಮಹಿಳೆಯರು ಆಕರ್ಷಿತರಾಗುವುದೂ ಹೆಚ್ಚಂತೆ.

7850 ಮಹಿಳೆಯರನ್ನು ಗುರಿಯಾಗಿಸಿಕೊಂಡು ದೀರ್ಘಾವಧಿಯ ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆ ಪ್ರಕಾರ ಇಂತಹ ದಂಪತಿಗಳು ಸುಮಾರು 18 ವರ್ಷಗಳ ತುಂಬಾ ಸಂತೋಷದಲ್ಲಿರುತ್ತಾರಂತೆ. ಹೀಗಂತ ದಕ್ಷಿಣ ಕೊರಿಯಾದ ಕಾಂಕುಕ್‌ ವಿಶ್ವವಿದ್ಯಾಲಯ ನಡೆಸಿದ  ಸಮೀಕ್ಷೆಯಲ್ಲಿ ಗೊತ್ತಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ