ಹಸಿವು ತಡೆದುಕೊಂಡರೆ ದೇಹದಲ್ಲಿ ಏನೇನಾಗುತ್ತೆ?

ಶನಿವಾರ, 30 ಮೇ 2020 (15:28 IST)
ದೇಹದ ಚೈತನ್ಯಕ್ಕೆ ಊಟ, ತಿಂಡಿ, ಹಣ್ಣುಗಳ ಸೇವನೆ ಅವಶ್ಯ. ಆದರೆ ಹಸಿವು ತಡೆದುಕೊಂಡರೆ ಹೀಗೆಲ್ಲಾ ಆಗುತ್ತದೆ.

ನಿಮಗೆ ಹಸಿವು ಆಗಿದ್ದಾಗಲೂ ಊಟ, ತಿಂಡಿ ಮಾಡದಿದ್ದರೆ ಶರೀರದ ಮೇಲೆ ಅದು ಪರಿಣಾಮ ಬೀರಿ ದುರ್ಬಲತೆ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಹೊಟ್ಟೆ ನೋವು, ತಲೆ ಸುತ್ತೋದಕ್ಕೆ ಪ್ರಾರಂಭವಾಗುವ ಸಾಧ್ಯತೆ ಇರುತ್ತದೆ.

ಕೆಲವೊಂದು ಬಾರಿ ಅಜೀರ್ಣದಿಂದಾಗಿ ಹೊಟ್ಟೆ ನೋವು ಬರುವ ಸಾಧ್ಯತೆ ಇರುತ್ತದೆ.

ಅಜೀರ್ಣದ ಕಾರಣದಿಂದ ಹೊಟ್ಟೆ ನೋವು ನಿಮಗೆ ಬಂದಿದ್ದರೆ ಅದನ್ನು ನೀವು ಹಸಿವಿನಿಂದಲೇ ಹೊಟ್ಟೆ ನೋವಾಗುತ್ತದೆ ಎಂದು ಭಾವಿಸಬಾರದು. ಹಾಗೊಂದು ವೇಳೆ ತಪ್ಪು ಗ್ರಹಿಕೆಯಿಂದ ಹೆಚ್ಚು ಆಹಾರ ಸೇವನೆ ಮಾಡಿದರೂ ಅದೂ ಸಹ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ