ನಂದಿ ಬೆಟ್ಟದ ಮಂಗಗಳ ಹಸಿವು ನೀಗಿಸಿದ ಕಿರುತೆರೆ ನಟ ಚಂದನ್

ಶುಕ್ರವಾರ, 3 ಏಪ್ರಿಲ್ 2020 (09:43 IST)
ಬೆಂಗಳೂರು: ಕನ್ನಡ ಕಿರುತೆರೆಯ ಹ್ಯಾಂಡ್ಸಮ್ ನಟ ಚಂದನ್ ಕುಮಾರ್ ಲಾಕ್ ಡೌನ್ ಸಂದರ್ಭದಲ್ಲಿ ವಿಶಿಷ್ಟವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.


ಎಲ್ಲರೂ ಬಡವರು, ಬೀದಿ ನಾಯಿಗಳ ಹಸಿವು ನೀಗಿಸುವ ಕೆಲಸ ಮಾಡಿದರೆ ನಟ ಚಂದನ್ ನಂದಿಬೆಟ್ಟದಲ್ಲಿರುವ ನೂರಾರು ಮಂಗಗಳಿಗೆ ಆಹಾರ ಹಾಕುವ ಕೆಲಸ ಮಾಡಿದ್ದಾರೆ.

ಬೆಳ್ಳಂ ಬೆಳಿಗ್ಗೆ ನಂದಿ ಬೆಟ್ಟಕ್ಕೆ ತಮ್ಮ ಸಂಗಡಿಗರ ಜತೆ ಕಾರಿನಲ್ಲಿ ಬಾಳೆ ಹಣ್ಣು, ಇತರ ಹಣ್ಣುಗಳನ್ನು ತುಂಬಿಕೊಂಡು ತೆರಳಿದ್ದು, ಅಲ್ಲಿನ ಮಂಗಗಳ ಹಸಿವು ನೀಗಿಸುವ ಕೆಲಸ ಮಾಡಿದ್ದಾರೆ. ಲಾಕ್ ಡೌನ್ ನಿಂದಾಗಿ ಇಲ್ಲಿಗೆ ಪ್ರವಾಸಿಗರು ಬರುತ್ತಿಲ್ಲ. ಹೀಗಾಗಿ ಮಂಗಗಳು ಆಹಾರವಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಮೂಕಪ್ರಾಣಿಗಳ ನೆರವಾಗಿದ್ದಾರೆ ಚಂದನ್. ಅವರ ಕೆಲಸಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ