ಬೆಂಗಳೂರು: ಮಕ್ಕಳಾದ ಮೇಲೆ ಮಹಿಳೆಯರಲ್ಲಿ ಲೈಂಗಿಕ ಕಾಮನೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ಇದಕ್ಕೆ ಮಕ್ಕಳ ಪಾಲನೆ, ಮನೆಗೆಲಸದಲ್ಲಿ ಸುಸ್ತಾಗುವುದು ಪ್ರಮುಖ ಕಾರಣವಾಗುತ್ತದೆ.
ಆದರೆ ಗಂಡ-ಹೆಂಡತಿ ಸಂಬಂಧ ಉಳಿಸಿಕೊಳ್ಳಬೇಕೆಂದರೆ ಲೈಂಗಿಕ ಸಂಬಂಧವೂ ಮುಖ್ಯವಾಗುತ್ತದೆ. ಈ ಕಾರಣಕ್ಕೆ ದಿನ ಕಳೆದಂತೆ ಮಹಿಳೆಯರು ಲೈಂಗಿಕ ಸಂಬಂಧವೆಂಬುದು ಯಾಂತ್ರಿಕವೆನಿಸುತ್ತದೆ. ಹೀಗಾಗಿ ಅದೊಂದು ತನ್ನ ಕರ್ತವ್ಯವೆನ್ನುವಂತೆ ಮಾಡುತ್ತಾಳೆ. ಇದರಿಂದಾಗಿ ರತಿಕ್ರೀಡೆ ಸಂದರ್ಭದಲ್ಲಿ ಆಕೆ ಗಂಡನ ಭಾವನೆಗೆ ಪ್ರತಿಕ್ರಿಯಿಸದೇ ಬೊಂಬೆಯಂತೆ ತನ್ನ ಕರ್ತವ್ಯ ಮುಗಿಸುತ್ತಾಳೆ. ಇಂತಹ ಸಂದರ್ಭದಲ್ಲಿ ಪುರುಷರು ತನ್ನ ಸಂಗಾತಿಯನ್ನು ಅರ್ಥ ಮಾಡಿಕೊಂಡು ಆಕೆಯ ಕೆಲಸದಲ್ಲಿ ಕೈ ಜೋಡಿಸಬೇಕು. ಕೆಲವೊಮ್ಮೆ ಜತೆಯಾಗಿ ನಡೆಸುವ ಒಂದು ವಾಕಿಂಗ್, ವಿಶ್ರಾಂತಿ ಸಮಯ, ಗಂಡ ತೋರುವ ಪ್ರೀತಿ ಇದರಿಂದಲೂ ಮಹಿಳೆ ಲೈಂಗಿಕ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳದಂತೆ ಮಾಡಬಹುದು.