ಯೋಗ ಮಾಡುವುದರಿಂದ ಲೈಂಗಿಕ ಜೀವನ ಸುಗಮವಾಗುತ್ತಾ?
ಹಲವು ಅಧ್ಯಯನಗಳ ಪ್ರಕಾರ ಯೋಗ ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಲೈಂಗಿಕ ಜೀವನ ಸುಧಾರಿಸುತ್ತದಂತೆ. ಎಲ್ಲಕ್ಕಿಂತ ಹೆಚ್ಚು ಲೈಂಗಿಕ ಆಸಕ್ತಿ, ಕ್ಷಮತೆ ಹೆಚ್ಚಿಸಲು ಯೋಗ ಸಹಕಾರಿ ಎಂದು ಅಧ್ಯಯನಗಳು ಹೇಳುತ್ತವೆ.
ಮಹಿಳೆಯರು ಸಾಮಾನ್ಯವಾಗಿ 40 ವರ್ಷ ದಾಟಿದ ಮೇಲೆ ಲೈಂಗಿಕಾಸಕ್ತಿ ಕಳೆದುಕೊಳ್ಳುತ್ತಾರೆ. ಆದರೆ ಯೋಗ ಮಾಡುವುದರಿಂದ ಲೈಂಗಿಕ ಕ್ಷಮತೆ ಹೆಚ್ಚುತ್ತದೆ, ಹಾಗೆಯೇ ದೈಹಿಕ ಸಾಮರ್ಥ್ಯವೂ ಹೆಚ್ಚುತ್ತದೆ ಎಂದು ಅಧ್ಯಯನ ವರದಿಗಳು ಹೇಳುತ್ತವೆ.