ಮೊಸರು ನಿಮ್ಮ ತೂಕ ಇಳಿಸಲು ಹೇಗೆಲ್ಲಾ ಸಹಕಾರಿ

ಸೋಮವಾರ, 4 ಅಕ್ಟೋಬರ್ 2021 (07:10 IST)
Benefits Of Curd : ಮೊಸರು ಒಂದು ಪ್ರೋಬಯಾಟಿಕ್ ಆಗಿದ್ದು ಅದು ಲ್ಯಾಕ್ಟೋಬಾಸಿಲಸ್ ಬಲ್ಗರಿಕಸ್ ಎಂಬ ಲೈವ್ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ, ಇದು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಕಾರಣವಾಗುತ್ತದೆ ಮತ್ತು ಹೊಟ್ಟೆಯ  ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ಒಂದು ಬಟ್ಟಲು ಮೊಸರು ಊಟವನ್ನು ಸಂಪೂರ್ಣ  ಮಾಡಲು ಬೇಕಾಗಿರುವ ಪ್ರಮುಖ ಅಂಶ. ಇದು ಬೆಳಗಿನ ಉಪಾಹಾರ, ಊಟ ಅಥವಾ ಭೋಜನ ಯಾವುದೇ ಇರಲಿ ಪ್ರತಿಯೊಂದರಲ್ಲೂ ಇದರ ಅಗತ್ಯವಿರುತ್ತದೆ.  ಒಂದು ಬಟ್ಟಲು ಮೊಸರು ಯಾವಾಗಲೂ ಆರೋಗ್ಯಕರ ಹಾಗೂ ಪ್ರಯೋಜನಕಾರಿ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಮೊಸರು, ಹಾಲಿನಿಂದ ಮಾಡಲಾಗುತ್ತದೆ, ನಮಗೆ ತಿಳಿದಿರುವಂತೆ ಇದರಲ್ಲಿ ಕ್ಯಾಲ್ಸಿಯಂ ತುಂಬಿದೆ. ಅದರ ವಿವಿಧ ಆರೋಗ್ಯ ಮತ್ತು ಸೌಂದರ್ಯ ಪ್ರಯೋಜನಗಳ ಹೊರತಾಗಿ, ನಿಮಗೆ  ಇದು ತೂಕ ಇಳಿಸಲು ಸಹಾಯ ಮಾಡುತ್ತದೆ ಎಂಬುದು ಸತ್ಯ.
ಮೊಸರು ಒಂದು ಪ್ರೋಬಯಾಟಿಕ್ ಆಗಿದ್ದು ಅದು ಲ್ಯಾಕ್ಟೋಬಾಸಿಲಸ್ ಬಲ್ಗರಿಕಸ್ ಎಂಬ ಲೈವ್ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ, ಇದು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಕಾರಣವಾಗುತ್ತದೆ ಮತ್ತು ಹೊಟ್ಟೆಯ  ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ಮೊಸರಿನಲ್ಲಿರುವ ಲೈವ್ ಬ್ಯಾಕ್ಟೀರಿಯಾವು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಲ್ಯಾಕ್ಟೋಬಾಸಿಲಸ್ ಬಲ್ಗರಿಕಸ್, ಮೊಸರಿನಲ್ಲಿರುವ ಬ್ಯಾಕ್ಟೀರಿಯಾವು ಕರುಳಿನ  ಆರೋಗ್ಯವನ್ನು ಸುಧಾರಿಸುತ್ತದೆ. ಇದು ತೂಕ ಕಡಿಮೆ ಮಾಡಲು ಕಾರಣವಾಗಿದೆ, ಇದರ ಸಹಾಯದಿಂದ ತ್ಯಾಜ್ಯವನ್ನು ಬೇಗನೆ ಹೊರಹಾಕಲಾಗುತ್ತದೆ, ಹೀಗಾಗಿ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ.
 ಪ್ರೋಟೀನ್ ಸಮೃದ್ಧವಾಗಿದೆ
ಹಾಲಿಗೆ ಹೋಲಿಸಿದರೆ ಮೊಸರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ  ಪ್ರೋಟೀನ್ ಇದ್ದು ಇದು ಆರೋಗ್ಯ ದೃಷ್ಟಿಯಿಂದ ಹೆಚ್ಚು ಪ್ರಯೋಜನಕಾರಿ.  ಮೊಸರಿನಲ್ಲಿ ಹೆಚ್ಚಿನ ಪ್ರೋಟೀನ್ ಅಂಶವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಲು ಕಾರಣವಾಗಿದೆ, ಏಕೆಂದರೆ ಪ್ರೋಟೀನ್ಗಳು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಹಾಗಾಗಿ ನಿಮ್ಮ ತೂಕವನ್ನು ಇಳಿಸಲು ಸಹಾಯವಾಗುತ್ತದೆ.
ಕ್ಯಾಲ್ಸಿಯಂ ಸಮೃದ್ಧವಾಗಿದೆ
ಇತರ ಡೈರಿ ಉತ್ಪನ್ನಗಳಂತೆ, ಮೊಸರು ಕೂಡ ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಮೊಸರಿನ ಬಟ್ಟಲಿನಲ್ಲಿರುವ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮೂಳೆಯ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ.  ನಮ್ಮ ದೇಹದ ತೂಕ ಹೆಚ್ಚಾಗದಂತೆ ತಡೆಯಲು ಆಹಾರದ ಕ್ಯಾಲ್ಸಿಯಂ ಕೂಡ ಮುಖ್ಯವಾಗಿದೆ.
ಲ್ಯಾಕ್ಟೋಸ್ ಕಡಿಮೆ ಇರುತ್ತದೆ
ನಿಮ್ಮ ಆಹಾರದಲ್ಲಿ ಮೊಸರನ್ನು ಸೇವನೆ ಮಾಡುವುದರಿಂದ ತೂಕ  ಕಳೆದುಕೊಳ್ಳಲು ಸಹಾಯ ಮಾಡುತ್ತದೆ.  ಮೊಸರಿನಲ್ಲಿ ಲ್ಯಾಕ್ಟೋಸ್ ಕಡಿಮೆ ಇರುವುದರಿಂದ ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸಿ, ನಿಮ್ಮ ದೇಹದಿಂದ ಕೊಬ್ಬಿನ ಅಂಶವನ್ನು ಹೊರಹಾಕಲು ಸಾಹಯ ಮಾಡುತ್ತದೆ.
ಮೊಸರಿನಲ್ಲಿ ಖನಿಜಗಳಲ್ಲಿ ಸಮೃದ್ಧವಾಗಿದೆ
ನಿಮ್ಮ ರಕ್ತದೊತ್ತಡದ ಹೆಚ್ಚಿಸುವ ಒಂದು ನಿರ್ದಿಷ್ಟ ಹಾರ್ಮೋನ್ ನಿಮ್ಮ  ತೂಕವನ್ನು ಹೆಚ್ಚಿಸಲು ಕಾರಣವಾಗಬಹುದು. ಆದರೆ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ನಂತಹ ಖನಿಜಗಳು ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಇದು ಜೀವಕೋಶಗಳಲ್ಲಿನ ಹೆಚ್ಚುವರಿ ನೀರನ್ನು ಸುಲಭವಾಗಿ ಹೊರಹಾಕಲು ಮತ್ತು ಮೂತ್ರಕೋಶವನ್ನು  ಸ್ವಚ್ಛ ಮಾಡಲು ಸಹಕಾರಿಯಾಗಿದೆ. ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ವಿಟಮಿನ್ ಮೊಸರಿನಲ್ಲಿ ಹೆಚ್ಚಿರುತ್ತದೆ
ವಿಟಮಿನ್ ಎ ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.  ನಿಮ್ಮ ತೂಕದ ಸಮಸ್ಯೆಗಳ ಮೇಲೆ ನೇರವಾಗಿ ಕಾರ್ಯನಿರ್ವಹಿಸುವುದಿಲ್ಲ. ಆದರೂ,  ಇದರ ಸೇವನೆಯು ನಿಮ್ಮ ತೂಕವನ್ನು ಕಾಪಾಡುತ್ತದೆ ಎಂದು ಹೇಳಲಾಗುತ್ತದೆ.  ಉದಾಹರಣೆಗೆ, ವಿಟಮಿನ್ ಎ ಸೇವನೆಯು ತೂಕ ಹೆಚ್ಚಾಗಲು ಮತ್ತು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುವ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ.
ಕಡಿಮೆ ಸ್ಯಾಚುರೇಟೆಡ್ ಕೊಬ್ಬು ಇರುತ್ತದೆ
100 ಗ್ರಾಂ ಮೊಸರು ಸುಮಾರು 1.7 ಗ್ರಾಂ ಸ್ಯಾಚುರೇಟೆಡ್ ಕೊಬ್ಬುಗಳನ್ನು ಹೊಂದಿರುತ್ತದೆ, ಸಾಮಾನ್ಯವಾಗಿ ಇದು  ಮಾಂಸ ಮತ್ತು ಎಣ್ಣೆಗಳಲ್ಲಿ ಹೇರಳವಾಗಿ ಕಂಡುಬರುತ್ತವೆ. ಸ್ಯಾಚುರೇಟೆಡ್ ಕೊಬ್ಬುಗಳ ಸೇವನೆಯು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಹೆಚ್ಚು ಮಾಡುತ್ತದೆ.  ಇದು ನಿಮ್ಮ ದೇಹದ  ತೂಕ ಹೆಚ್ಚಿಸಲು ಕಾರಣವಾಗಬಹುದು. ಹೀಗಾಗಿ, ಕಡಿಮೆ ಕೊಬ್ಬಿನ ಅಂಶದಿಂದಾಗಿ ಮೊಸರು ದೇಹದ ತೂಕ ಇಳಿಸುವಲ್ಲಿ ಸಹಾಯ ಮಾಡುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ