ಖಿನ್ನತೆಯು ವ್ಯಕ್ತಿಯ ಆಲೋಚನೆಗಳು, ನಡವಳಿಕೆ, ಭಾವನೆಗಳು ಮತ್ತು ಯೋಗಕ್ಷೇಮದ ಪ್ರಜ್ಞೆಯ ಮೇಲೆ ಪರಿಣಾಮ ಬೀರುವ ಮೂಲಕ ಮನಸ್ಥಿತಿ ಅಸಮತೋಲನ ಮತ್ತು ತಿರಸ್ಕಾರಕ್ಕೆ ಕಾರಣವಾಗುತ್ತದೆ. ಖಿನ್ನತೆಗೆ ಒಳಗಾದ ವ್ಯಕ್ತಿಯ ಮನೋಭಾವವು ಪ್ರೀತಿಪಾತ್ರರು ಅಥವಾ ಆಪ್ತರು ನಮ್ಮಿಂದ ದೂರಾದಾಗ ಇಲ್ಲವೇ ಅಸಾಮಾನ್ಯ ಘಟನೆಗಳು ನಡೆದಾಗ ಇದು ಕಂಡುಬರುವ ಸಾಧ್ಯತೆ ಹೆಚ್ಚಿರುತ್ತದೆ.
ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಗಂಭೀರ ಸ್ಥಿತಿಯಾಗಿದೆ. ಇದು ಕೆಲವು ದೈಹಿಕ ಕಾಯಿಲೆಗಳ ಲಕ್ಷಣ ಮತ್ತು ಕೆಲವು ಔಷಧಿಗಳ ಮತ್ತು ವೈದ್ಯಕೀಯ ಚಿಕಿತ್ಸೆಗಳ ಅಡ್ಡ ಪರಿಣಾಮದಿಂದಾಗಿಯು ಖಿನ್ನತೆ ಉಂಟಾಗಬಹುದು. ಇದಕ್ಕೆ ವಯಸ್ಸಿನ ಮಿತಿಯಿರುವುದಿಲ್ಲ ಆದ್ದರಿಂದ ಯಾವುದೇ ವಯಸ್ಸಿನ ಜನರು ಖಿನ್ನತೆಗೆ ಒಳಗಾಗಬಹುದು.
ಖಿನ್ನತೆಯ ಕಾರಣಗಳು ಯಾವುವು?
-ಬಾಲ್ಯದಲ್ಲಿ ಪ್ರತಿಕೂಲತೆ, ನಿರ್ಲಕ್ಷ್ಯ, ಮಾನಸಿಕ ನಿಂದನೆ, ಲೈಂಗಿಕ ಕಿರುಕುಳ, ಮತ್ತು ಒಡಹುಟ್ಟಿದವರೊಂದಿಗೆ ಪೋಷಕರ ನಡವಳಿಕೆ ಪ್ರೌಢಾವಸ್ಥೆಯಲ್ಲಿ ಖಿನ್ನತೆಗೆ ಕಾರಣವಾಗಬಹುದು.
-ನಿದ್ರಾಹೀನತೆ, ಹೆರಿಗೆ, ಋತುಬಂಧ, ಆರ್ಥಿಕ ತೊಂದರೆಗಳು, ನಿರುದ್ಯೋಗ, ಒತ್ತಡ (ಕೆಲಸ, ಶಿಕ್ಷಣ, ಕುಟುಂಬ), ವೈದ್ಯಕೀಯ ರೋಗನಿರ್ಣಯ (ಕ್ಯಾನ್ಸರ್, ಎಚ್ಐವಿ, ಇತ್ಯಾದಿ), ಬೆದರಿಸುವಿಕೆ, ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದು, ಅತ್ಯಾಚಾರ, ಅಸೂಯೆ, ಬೇರ್ಪಡಿಸುವಿಕೆ ಮತ್ತು ದುರಂತದ ಗಾಯ ಹೀಗೆ ಹಲವಾರು ಕಾರಣಗಳಿವೆ.
ಖಿನ್ನತೆಯ ಲಕ್ಷಣಗಳು ಯಾವುವು?
ಭಾವನೆಗಳು:-
ದುಃಖ, ಹತಾಶೆ, ಅಪರಾಧ ಭಾವ, ಕೋಪ
ವಿಚಾರಗಳು:-
ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ತೊಂದರೆ, ಮರೆವು, ತಮ್ಮನ್ನು ಹಾನಿಗೊಳಗಾಗಿಸುವ ಯೋಚನೆಗಳು
ದೈಹಿಕ ತೊಂದರೆಗಳು:-
ದಣಿವು ಅಥವಾ ಶಕ್ತಿಯ ಕೊರತೆ
ನಿದ್ರೆಯ ಕೊರತೆ
ತೂಕ ಇಳಿಕೆ
ಈ ಸಲಹೆಗಳು ನಿಮಗೆ ಉತ್ತಮವಾಗಿಸಲು ಸಹಾಯ ಮಾಡಬಹುದು.
1. ವ್ಯಾಯಾಮ
ನಿಯಮಿತವಾದ ವ್ಯಾಯಾಮವು ಆರೋಗ್ಯವನ್ನು ಹೆಚ್ಚಿಸುವುದರ ಜೊತೆಗೆ ಖಿನ್ನತೆಗೆ ರಾಮಬಾಣವಾಗಿದೆ ಮತ್ತು ಮೆದುಳನ್ನು ಸಕಾರಾತ್ಮಕ ರೀತಿಯಲ್ಲಿ ಯೋಚಿಸಲು ಉತ್ತೇಜಿಸುತ್ತದೆ.
2. ಕೆಫೀನ್ ತ್ಯಜಿಸಿ
ಕಾಫಿ ಮತ್ತು ಇತರ ವಿಧದ ಕೆಫೀನ್‌ಗಳ ವ್ಯಸನವು ಸಾಮಾನ್ಯ ಮನೋಭಾವಗಳೊಂದಿಗೆ ಹಸ್ತಕ್ಷೇಪ ಮಾಡುತ್ತದೆ ಮತ್ತು ಖಿನ್ನತೆಯನ್ನು ಉಲ್ಬಣಗೊಳಿಸಬಹುದು.
3. ಆರೋಗ್ಯಕರ ಆಹಾರವನ್ನು ಸೇವಿಸಿ
ಖಿನ್ನತೆಯನ್ನು ಪರಿಹರಿಸುವ ಮ್ಯಾಜಿಕ್ ಪಥ್ಯಗಳಿಲ್ಲ ಆದರೆ ನೀವು ಆಹಾರದ ಕಾಳಜಿ ವಹಿಸುವುದು ಉತ್ತಮ ಅನಿಯಮಿತವಾದ ಆಹಾರ ಸೇವನೆ ದೇಹವನ್ನು ಹಾನಿ ಮಾಡುವುದರ ಜೊತೆಗೆ ಖಿನ್ನತೆಯನ್ನು ಹೆಚ್ಚಿಸಬಹುದು.
4. ಸಾಕಷ್ಟು ನಿದ್ರೆ ಮಾಡಿ
ಖಿನ್ನತೆಯಲ್ಲಿರುವಾಗ ನಿದ್ರಾ ಹೀನತೆ ಉಂಟಾಗುತ್ತದೆ ಇದರಿಂದ ಖಿನ್ನತೆ ಮತ್ತಷ್ಟು ಉಲ್ಬಣಗೊಳಿಸುತ್ತದೆ.
5. ಧನಾತ್ಮಕವಾಗಿ ಯೋಚಿಸಿ
ಖಿನ್ನತೆಯ ವಿರುದ್ಧದ ನಿಮ್ಮ ಹೋರಾಟದಲ್ಲಿ, ಬಹಳಷ್ಟು ಕೆಲಸವು ಮಾನಸಿಕವಾಗಿರುತ್ತದೆ - ನೀವು ಹೇಗೆ ಯೋಚಿಸುತ್ತೀರಿ ಎಂಬುದರ ಮೇಲೆ ನಿಮ್ಮನ್ನು ನೀವು ಬದಲಾಯಿಸಿಕೊಳ್ಳಬಹುದು. ನೀವು ಖಿನ್ನತೆಗೆ ಒಳಗಾದಾಗ, ನೀವು ಸಾಧ್ಯವಾದಷ್ಟು ಒಳ್ಳೆಯ ಪುಸ್ತಕಗಳನ್ನು ಓದಿ, ನಿಮ್ಮ ಆಪ್ತರೊಂದಿಗೆ ಮನಬಿಚ್ಚಿ ಮಾತನಾಡಿ ಮತ್ತು ಮನಸಿಗೆ ಮುದ ನೀಡುವ ಜಾಗಗಳಿಗೆ ಪ್ರವಾಸ ಕೈಗೊಳ್ಳಿ ಇನ್ನೂ ನಿಮ್ಮ ಕೈಯಲ್ಲಿ ಸಾಧ್ಯವಾಗದಿದ್ದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಧನಾತ್ಮಕವಾಗಿ ಚಿಂತಿಸಿ ಖಿನ್ನತೆಯಿಂದ ಮುಕ್ತಿ ಪಡೆಯಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.