ನಿಮ್ಮ ಮಕ್ಕಳು ಮಾತನಾಡುವಾಗ ತೊದಲುತ್ತಾರಾ? ಹಾಗಾದ್ರೆ ಈ ಮನೆಮದ್ದನ್ನು ತಿನ್ನಿಸಿ

ಗುರುವಾರ, 21 ಫೆಬ್ರವರಿ 2019 (06:06 IST)
ಬೆಂಗಳೂರು : ಕೆಲವು ಮಕ್ಕಳು ತೊದಲು ಮಾತನಾಡುತ್ತವೆ. ಅಂತ ಮಕ್ಕಳ ತಂದೆತಾಯಿಯಂದಿರು ಚಿಂತೆ ಮಾಡುವ ಬದಲು ಈ ಮನೆಮದ್ದನ್ನು ನೀಡಿ ನಿಮ್ಮ ಮಕ್ಕಳ ಸಮಸ್ಯೆಯನ್ನು ಸರಿಪಡಿಸಿಕೊಳ್ಳಿ.

ನಾಲಿಗೆ ತೊದಲು ಸಮಸ್ಯೆ ಇರುವವರು ನಿಯಮಿತವಾಗಿ ಬೆಟ್ಟದನಲ್ಲಿ ಕಾಯಿ, ಬಾದಾಮಿ, ಕರಿಮೆಣಸು, ಒಣ ಕರ್ಜೂರವನ್ನು ನಾಲಿಗೆಯಿಂದ ಚೀಪುತ್ತಿದ್ದರೆ ಸಮಸ್ಯೆ ನಿವಾರಣೆಯಾಗುತ್ತದೆ. ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಉಪ್ಪನ್ನು ಕಲಸಿ ಪ್ರತಿದಿನ ನಾಲಿಗೆ ತಿಕ್ಕಿದರೆ ನಾಲಿಗೆ ತೊದಲುವಿಕೆ ಕಡಿಮೆಯಾಗುತ್ತದೆ.

 

ಬಾದಾಮಿ, ಕರಿಮೆಣಸು ಮತ್ತು ಸ್ವಲ್ಪ ಸಕ್ಕರೆಗೆ ಸ್ವಲ್ಪ ನೀರನ್ನು ಸೇರಿಸಿ ಪೇಸ್ಟ್‌ ಮಾಡಿ ಅದನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ನಾಲಿಗೆ ತೊದಲು ನಿವಾರಣೆಯಾಗಿ ಮಾತು ಸ್ಪಷ್ಟವಾಗುತ್ತದೆ. ಬಜೆ ಪುಡಿಗೆ ಏಲಕ್ಕಿ ಪುಡಿ, ಲವಂಗದ ಪುಡಿ, ವಿಳ್ಯೆದೆಲೆ ಬೇರಿನ ಪುಡಿ ಮತ್ತು ಸ್ವಲ್ಪ ಸಕ್ಕರೆ ಸೇರಿಸಿ ದಿನಾ ಬೆಳಗ್ಗೆ ಅದರಿಂದ ನಾಲಿಗೆ ತಿಕ್ಕಿದರೆ ನಾಲಿಗೆ ತೆಳುವಾಗಿ ಮಾತು ಸರಿಯಾಗುತ್ತದೆ.ಬೆಳಗ್ಗೆ ಎದ್ದ ಕೂಡಲೆ ಅರ್ಧ ಚಮಚ ಬೆಟ್ಟದನಲ್ಲಿಕಾಯಿ ಪುಡಿಗೆ ಅರ್ಧ ಚಮಚ ಹಸುವಿನ ತುಪ್ಪ ಮತ್ತು ಕಲ್ಲುಸಕ್ಕರೆ ಸೇರಿಸಿ ಸೇವಿಸಿದರೆ ನಾಲಿಗೆ ತೊದಲುವುದು ಕಡಿಮೆಯಾಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ