ನಕಲಿ ದೇಶದೊಂದಿಗೆ ಅಮೆರಿಕದ 30 ನಗರಗಳು ಒಪ್ಪಂದ!?

ಮಂಗಳವಾರ, 21 ಮಾರ್ಚ್ 2023 (10:12 IST)
ವಾಷಿಂಗ್ಟನ್ : ಸ್ವಯಂ ಘೋಷಿತ ದೇವಮಾನವ ಹಾಗೂ ಭಾರತದಿಂದ ಪಲಾಯನಗೈದ ನಿತ್ಯಾನಂದನ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ಅಮೆರಿಕದ 30 ಕ್ಕೂ ಹೆಚ್ಚು ನಗರಗಳ ಜೊತೆ ಸ್ನೇಹಪೂರ್ವಕವಾಗಿ ಸೇರಿರುವ ನಗರಗಳೆಂಬ ಒಪ್ಪಂದವನ್ನು ಮಾಡಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

ನ್ಯೂಜೆರ್ಸಿಯ ನೆವಾರ್ಕ್ ನಗರ ನಿತ್ಯಾನಂದನ ನಕಲಿ ರಾಷ್ಟ್ರದೊಂದಿಗೆ ಸಿಸ್ಟರ್ ಸಿಟಿ ಒಪ್ಪಂದವನ್ನು ರದ್ದುಗೊಳಿಸಿದೆ. ಇದಾದ ಬಳಿಕ ಅಮೆರಿಕದ ರಿಚ್ಮಂಡ್, ವರ್ಜೀನಿಯಾ, ಡೇಟನ್, ಬಹಿಯೊ, ಬುಯೆನಾ ಪಾರ್ಕ್, ಫ್ಲೋರಿಡಾ ಮುಂತಾದ ನಗರಾಡಳಿತಗಳು ಕೈಲಾಸದೊಂದಿಗೆ ಒಪ್ಪಂದ ಮಾಡಿಕೊಂಡು ತಾವೂ ಕೈಲಾಸದ ಭಾಗವಾಗಿರುವುದಾಗಿ ಹಾಗೂ ಉಪನಗರಗಳ ಮಾದರಿಯಲ್ಲಿ ಇರುವುದಾಗಿ ಘೋಷಿಸಿಕೊಂಡಿದೆ.

ನೆವಾರ್ಕ್ ಹಾಗೂ ಕೈಲಾಸ ನಡುವಿನ ಸಿಸ್ಟರ್ ಸಿಟಿ ಒಪ್ಪಂದಕ್ಕೆ ಈ ವರ್ಷ ಜನವರಿ 12 ರಂದು ಸಹಿ ಹಾಕಲಾಗಿತ್ತು. ಈ ಒಪ್ಪಂದದ ಸಮಾರಂಭವನ್ನು ಕೂಡಾ ನೆವಾರ್ಕ್ನ ಸಿಟಿ ಹಾಲ್ನಲ್ಲಿ ನಡೆಸಲಾಗಿತ್ತು. 
ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಅಮೆರಿಕದ ಫಾಕ್ಸ್ ನ್ಯೂಸ್ ಸಂಸ್ಥೆ ತನಿಖಾ ವರದಿಯೊಂದನ್ನು ಸಿದ್ಧಪಡಿಸಿದ್ದು, ಅದರಲ್ಲಿ ನಿತ್ಯಾನಂದ ಎಂಬ ನಕಲಿ ಸ್ವಾಮೀಜಿ ವಾಸ್ತವದಲ್ಲಿ ಅಸ್ತಿತ್ವದಲ್ಲಿಯೇ ಇಲ್ಲದ ಕೇವಲ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಬಹುದಾದಂತಹ ದೇಶವೊಂದನ್ನು ಸೃಷ್ಟಿಸಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ