ಡ್ರೋಣ್ ದಾಳಿಗೆ ಗಾಯಗೊಂಡ 8 ಮಂದಿ..!

ಗುರುವಾರ, 2 ಸೆಪ್ಟಂಬರ್ 2021 (12:30 IST)
ದುಬೈ: 24 ಗಂಟೆಗಳಲ್ಲಿ ಎರಡನೇ ಬಾರಿ ನಡೆದ ಡ್ರೋಣ್ ದಾಳಿಗೆ ಸೌದಿ ಅರೇಬಿಯಾ ಏರ್ಪೋರ್ಟ್ ನಲ್ಲಿ 8 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಈ ದಾಳಿಯನ್ನ ಸದ್ಯಕ್ಕೆ ಯಾವ ಸಂಘಟನೆಯೂ ಒಪ್ಪಿಕೊಂಡಿಲ್ಲ.

ಸೌದಿ ನೇತೃತ್ವದಲ್ಲಿ ಮಿಲಿಟರಿ ಪಡೆ ಇರಾನದ ಬೆಂಬಲಿತ ಶಿಯಾ ಬಂಡಾಯದ ವಿರುದ್ಧ ಯೆಮೆನ್ ನಲ್ಲಿ ನಡೆಯುತ್ತಿರೋ ಯುದ್ಧದಲ್ಲಿ ಕೈ ಜೋಡಿಸಿದೆ. ಇದು ಎರಡನೇ ದಾಳಾಯಾಗಿದ್ದು, ಮೊದಲ ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ. ಆದ್ರೆ ಈ ಬಾರಿ ಎಂಟು ಮಂದಿಗೆ ಗಂಭೀರ ಗಾಯವಾಗಿದೆ.
ಸಿಡಿ ಮದ್ದು ತುಂಬಿದ್ದ ಡ್ರೋಣ್ ದಾಳಿ ಮಾಡಿದ್ದು, ಎಂಟು ಮಂದಿಗೆ ಗಾಯಗಳಾಗಿದ್ದರೆ, ಒಂದು ಪ್ರಯಾಣಿಕರ ವಿಮಾನವೇ ಹಾನಿಗೀಡಾಗಿದೆ. ಈ ಡ್ರೋಣ್ ದಾಳಿಯ ಹಿಂದೆ ಯಾರ ಕೈವಾಡವಿದೆ ಎಂದು ಇನ್ನು ಯಾರು ಒಪ್ಪಿಕೊಂಡಿಲ್ಲ. ಹೀಗಾಗಿ ತನಿಖೆಯ ನಂತರ ಸತ್ಯ ಹೊರ ಬರಲಿದೆ.
ಯೆಮೆನ್ ಹೌತಿ ಬಂಡಾಯದವರ ದ್ಷೇಷ ಇದೇ ಮೊದಲೇನು ಅಲ್ಲ. 2015 ರಿಂದಲೂ ದ್ವೇಷ ಸಾಧಿಸಿಕೊಂಡೆ ಬಂದಿದ್ದಾರೆ. ಕೆಲವು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ಹಾಗೂ ಸೇನಾ ನೆಲೆಗಳನ್ನೇ ಟಾರ್ಗೆಟ್ ಮಾಡಿಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ