ನ್ಯೂ ಇಯರ್ ಗೆ ವಿದೇಶ ಪ್ರವಾಸ ಮಾಡಬೇಕಾ? ಹಾಗಿದ್ದರೆ 1 ಲಕ್ಷದಲ್ಲಿ ಈ ದೇಶಕ್ಕೆ ಹೋಗಬಹುದು!
ಕಡಿಮೆ ಖರ್ಚಿನಲ್ಲಿ ವಿದೇಶ ಪ್ರವಾಸ ಮಾಡಬೇಕು ಎಂದಾದರೆ ನಿಮಗೆ ಅನುಕೂಲಕರವಾಗಬಹುದಾದ ತಾಣವೆಂದರೆ ಶ್ರೀಲಂಕಾ. ನಮ್ಮ ನೆರೆಯ ರಾಷ್ಟ್ರಕ್ಕೆ 1 ಲಕ್ಷ ಬಜೆಟ್ ಇಟ್ಟುಕೊಂಡು ಪ್ರವಾಸ ಮಾಡಬಹುದು.
ಭಾರತೀಯರಿಗೆ ಕಡಿಮೆ ಖರ್ಚಿನಲ್ಲಿ ಪ್ರವಾಸ ಮಾಡಬಹುದಾದ ವಿದೇಶೀ ತಾಣಗಳಲ್ಲಿ ಶ್ರೀಲಂಕಾ ಕೂಡಾ ಒಂದು. ರಾಮಾಯಣ ಕಾಲದ ಇತಿಹಾಸ ಹೇಳುವ ಅನೇಕ ಕುರುಹುಗಳು ಇಂದಿಗೂ ಲಂಕಾದಲ್ಲಿದೆ. ಹೀಗಾಗಿ ಲಂಕಾ ಪ್ರವಾಸ ಭಾರತೀಯರಿಗೂ ಅಚ್ಚುಮೆಚ್ಚು.
ಸುಮಾರು 1 ಲಕ್ಷ ರೂ. ಬಜೆಟ್ ನಲ್ಲಿ ಶ್ರೀಲಂಕಾ ಟೂರ್ ಪ್ಯಾಕೇಜ್ ನೀಡುವ ಏಜೆನ್ಸಿಗಳು ಸಾಕಷ್ಟಿವೆ. ಹೀಗಾಗಿ ಬೀಚ್, ಪ್ರಕೃತಿ ಸೌಂದರ್ಯ, ಒಳ್ಳೆಯ ಆಹಾರ ಜೊತೆಗೆ ಕಣ್ಮನ ತಣಿಸುವ ಪ್ರವಾಸೀ ತಾಣಗಳಿಗೆ ಸುತ್ತಾಡಬೇಕು ಎಂದಾದರೆ ಲಂಕಾ ಪ್ರವಾಸ ಮಾಡಬಹುದು.