ಇಟೆಲಿ ಪ್ರಧಾನಿ ಮೆಲೊನಿ ಜೊತೆ ಮೋದಿ ಸೆಲ್ಫೀ: ಇದು ‘ಮೆಲೊಡಿ’ ಜೋಡಿ!

ಶನಿವಾರ, 2 ಡಿಸೆಂಬರ್ 2023 (10:59 IST)
Photo Courtesy: Twitter
ನವದೆಹಲಿ: ವಿಶ್ವ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ಭಾಗಿಯಾಗಲು ದುಬೈನಲ್ಲಿರುವ ಪ್ರಧಾನಿ ಮೋದಿ ಇಟೆಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಜೊತೆ ತೆಗೆದ ಸೆಲ್ಫೀ ಫೋಟೋ ಈಗ ವೈರಲ್ ಆಗಿದೆ.

ಪ್ರಧಾನಿ ಮೋದಿ ಜೊತೆ ಇಟೆಲಿ ಪ್ರಧಾನಿ ಮೆಲೊನಿ ಸೆಲ್ಫೀ ತೆಗೆದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು. ಜೊತೆಗೆ ನಾವು ಉತ್ತಮ ಸ್ನೇಹಿತರು ಎಂದು ಬರೆದುಕೊಂಡಿದ್ದರು.

ವಿಶೇಷವೆಂದರೆ ಈ ಫೋಟೋದಲ್ಲಿ ತಾವು ಪ್ರಧಾನಿ ಎಂಬುದನ್ನೂ ಮರೆತು ಮೆಲೊನಿ ಸ್ನೇಹಿತೆಯಂತೇ ಪೋಸ್ ನೀಡಿದ್ದಾರೆ. ಇವರಿಬ್ಬರ ಈ ಕ್ಯೂಟ್ ಫೋಟೋ ನೆಟ್ಟಿಗರ ಗಮನ ಸೆಳೆದಿದೆ.

ಜೊತೆಗೆ ಈ ಫೋಟೋದಲ್ಲಿ ಮೋದಿ ಹೆಸರಿನ ಕೊನೆಯ ಅಕ್ಷರ ಮತ್ತು ತಮ್ಮ ಹೆಸರಿನ ಮೊದಲ ಅಕ್ಷರ ಸೇರಿಸಿ ಮೆಲೊನಿ ತಮ್ಮಿಬ್ಬರ ಸ್ನೇಹಕ್ಕೆ ‘ಮೆಲೊಡಿ’ ಎಂದು ಹೆಸರಿಟ್ಟಿದ್ದಾರೆ. ದುಬೈನಲ್ಲಿ ನಡೆಯುತ್ತಿರುವ ಹವಾಮಾನ ಬದಲಾವಣೆ ಸಮ್ಮೇಳನಲ್ಲಿ ಮೋದಿ ನಾಲ್ಕು ಸೆಷನ್ ಗಳ ಸುದೀರ್ಘವಾಧಿಯ ಭಾಷಣ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ