ಕ್ಷಿಪಣಿ ಹಾರಿಸಿ ಉಕ್ರೇನ್ ಎಡವಟ್ಟು?

ಗುರುವಾರ, 17 ನವೆಂಬರ್ 2022 (08:06 IST)
ಕೀವ್ : ಉಕ್ರೇನ್ ಗಡಿಗೆ ಕೇವಲ 5 ಕಿಮೀ ದೂರದಲ್ಲಿರುವ ಪೋಲೆಂಡ್ನ ಪ್ರಜೊವೊಡೋವ್ ಎಂಬ ಹಳ್ಳಿಯಲ್ಲಿ ಕ್ಷಿಪಣಿಯೊಂದು ಅಪ್ಪಳಿಸಿದೆ.

ಆರಂಭದಲ್ಲಿ ಇದು ರಷ್ಯಾ ಪ್ರಯೋಗಿಸಿದ ಕ್ಷಿಪಣಿ ಎಂದು ಸುದ್ದಿಯಾಗಿತ್ತು. ಇಬ್ಬರು ನಾಗರಿಕರು ಮೃತಪಟ್ಟ ಹಿನ್ನೆಲೆಯಲ್ಲಿ ಪೋಲೆಂಡ್ನಲ್ಲಿ ಹೈ ಅಲರ್ಟ್ ಸೃಷ್ಟಿಯಾಗಿದ್ದು ಅಲ್ಲಿನ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಇದು ಉಕ್ರೇನ್ ಪ್ರಯೋಗಿಸಿದ ಕ್ಷಿಪಣಿ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೋಲೆಂಡ್ ಸೇನಾ ಅಧಿಕಾರಿಗಳು ತೆರಳಿದ್ದು ತನಿಖೆ ನಡೆಸುತ್ತಿದ್ದಾರೆ.

ನಮ್ಮ ಕ್ಷಿಪಣಿ ದಾಳಿಯನ್ನು ತಡೆಯಲು ಉಕ್ರೇನ್ ಹಾರಿಸಿದ ಏರ್ ಡಿಫೆನ್ಸ್ ಕ್ಷಿಪಣಿ ಎಂದು ರಷ್ಯಾ ಹೇಳಿದೆ. ಉಕ್ರೇನ್ ಕ್ಷಿಪಣಿಯ ಫೋಟೋ ಲಭ್ಯವಾಗುತ್ತಿದ್ದಂತೆ ರಷ್ಯಾ ಪಾಶ್ಚಿಮಾತ್ಯ ಜಗತ್ತಿನ ಮೇಲೆ ಮುಗಿಬಿದ್ದಿದೆ. ಇದೆಲ್ಲಾ ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸುವ ತಂತ್ರ ಎಂದು ಕಿಡಿಕಾರಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ