ಟಾರ್ಗೆಟ್ ರೀಚ್ ಆಗದ ಸಿಬ್ಬಂದಿಗಳಿಗೆ ಮೀನು, ಕೋಳಿ ರಕ್ತ ಸೇವಿಸುವ ಶಿಕ್ಷೆ ನೀಡಿದ ಚೀನಾ ಕಂಪೆನಿ

ಗುರುವಾರ, 15 ಆಗಸ್ಟ್ 2019 (09:06 IST)
ಚೀನಾ : ಚೀನಾದ ಕಂಪೆನಿಯೊಂದು ಟಾರ್ಗೆಟ್ ರೀಚ್ ಆಗದ ತಮ್ಮ ಕೆಲಸದ ಸಿಬ್ಬಂದಿಗಳಿಗೆ ನೀಡಿದ ಶಿಕ್ಷೆಯ ಬಗ್ಗೆ ಕೇಳಿದರೆ ಶಾಕ್ ಆಗ್ತೀರಾ.




ಹೌದು. ಈ ಹಿಂದೆ ಚೀನಾದ ಕಂಪೆನಿಯೊಂದು ಸಿಬ್ಬಂದಿಗಳು ತಮ್ಮ ಟಾರ್ಗೆಟ್ ರೀಚ್ ಆಗಿಲ್ಲ ಎಂದು ರೋಡ್ ಮೇಲೆ ಅಂಬೆಗಾಲಿನಲ್ಲಿ ನಡೆಯುವ ಶಿಕ್ಷೆ ವಿಧಿಸಿದೆ. ಇದೀಗ ಆದೇರೀತಿ ಟಾರ್ಗೆಟ್ ಮುಟ್ಟದ ಸಿಬ್ಬಂದಿಗೆ, ಕಂಪನಿ ಮಾಲೀಕನೊಬ್ಬ ಹಸಿ ಮೀನು ಹಾಗೂ ಕೋಳಿ ರಕ್ತವನ್ನು ಕುಡಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಅಲ್ಲದೇ ಇಂಥ ಶಿಕ್ಷೆ ನೀಡಿದ್ರೆ ಮತ್ತೆ ಸಿಬ್ಬಂದಿ ಆ ತಪ್ಪುಗಳನ್ನು ಮಾಡುವುದಿಲ್ಲ ಎಂದು ಹೇಳುವುದರ ಮೂಲಕ ಆ ಕಂಪೆನಿಯ ಮಾಲೀಕ ತನ್ನ ಈ ನೀಚ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ