ಮಗಳನ್ನೇ ಕೊಂದ ದಂಪತಿಗೆ ಈ ಶಿಕ್ಷೆ?

ಶನಿವಾರ, 10 ಆಗಸ್ಟ್ 2019 (16:48 IST)

ಸ್ವಂತ ಮಗಳನ್ನೇ ಕೊಂದಿದ್ದ ದಂಪತಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ತಮ್ಮ ಮಗಳು ಪ್ರೀತಿ ಮಾಡಿ ಬೇರೆ ಜಾತಿ ಹುಡುಗನನ್ನ ಮದುವೆಯಾಗಿದ್ದಳು. ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ದೀಪ್ತಿ (26) ಯನ್ನು ತಂದೆ ಹರಿಬಾಬು ಮತ್ತು ತಾಯಿ ಸಾಮ್ರಾಜ್ಯಂ ಅವರು ಕೊಲೆ ಮಾಡಿದ್ದರು.

ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಈ ಘಟನೆ ನಡೆದಿದೆ. ಅಂದಹಾಗೆ ಮದುವೆಯಾದ ಮಾರನೇ ದಿನವೇ ತಮ್ಮ ಮಗಳನ್ನು ತಂದೆ-ತಾಯಿ ಹತ್ಯೆ ಮಾಡಿದ್ದರು.

ದೀಪ್ತಿಯನ್ನ ಪ್ರೀತಿಸಿ ಮದುವೆಯಾಗಿದ್ದ ಕಿರಣ್ ಎಂಬಾತ ಈ ಕುರಿತು ದೂರು ನೀಡಿದ್ದನು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ