ಜೂನ್ 6 ರಂದು ಭಾರತ-ಚೀನಾ ಸೇನಾ ಅಧಿಕಾರಿಗಳ ಮಟ್ಟದ ಮಾತುಕತೆ

ಬುಧವಾರ, 3 ಜೂನ್ 2020 (11:28 IST)
ನವದೆಹಲಿ: ಲಡಾಖ್ ಗಡಿಯಲ್ಲಿ ಉಂಟಾಗಿರುವ ಗಡಿ ಬಿಕ್ಕಟ್ಟು ಪರಿಹಾರಕ್ಕೆ ಭಾರತ ಮತ್ತು ಚೀನಾ ನಡುವೆ ಹೊಸದಾಗಿ ಜೂನ್ 6 ರಂದು ಮಾತುಕತೆಯಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.


ಈಗಾಗಲೇ ಅಧಿಕಾರಿಗಳ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆ ನಡೆದು ವಿಫಲವಾಗಿತ್ತು. ಈಗ ಮತ್ತೆ ಹೊಸದಾಗಿ ಮಾತುಕತೆ ನಡೆಸಲು ಎರಡೂ ರಾಷ್ಟ್ರಗಳು ತೀರ್ಮಾನಿಸಿವೆ.

ಗಡಿ ಭಾಗದ ವಿವಾದಿತ ಭೂ ಪ್ರದೇಶ ನಮ್ಮದು ಎಂದು ಎರಡೂ ರಾಷ್ಟ್ರಗಳು ವಾದ ಮಂಡಿಸುತ್ತಿವೆ. ಈ ವಿಚಾರವಾಗಿ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ