ಕ್ಯಾಲಿಫೋರ್ನಿಯಾ ಕಡಲ ತೀರದಲ್ಲಿ ಕಂಡುಬಂದ ಸತ್ತ ಮಸ್ಸೆಲ್ ಗಳು. ಕಾರಣವೇನು ಗೊತ್ತಾ?

ಬುಧವಾರ, 3 ಜುಲೈ 2019 (09:03 IST)
ಕ್ಯಾಲಿಫೋರ್ನಿಯಾ : ಇತ್ತೀಚೆಗೆ ಕ್ಯಾಲಿಫೋರ್ನಿಯಾ ಕಡಲ ತೀರದಲ್ಲಿ ಸತ್ತ ಮಸ್ಸೆಲ್ ಗಳು ಹಾಗೂ ಸುಟ್ಟ ಚಿಪ್ಪುಗಳ ಸಂಖ್ಯೆ ಹೆಚ್ಚಾಗಿ ಕಂಡುಬಂದಿದೆಯಂತೆ.




ಯುನೈಟೆಡ್ ಸ್ಟೇಟ್ ನ ಪಶ್ಚಿಮ ಕರಾವಳಿಯಲ್ಲಿ ತೀವ್ರವಾದ ಶಾಖದ ಅಲೆಯಿಂದಾಗಿ ಮಸ್ಸೆಲ್ ಗಳು ಚಿಪ್ಪಿನ ಒಳಗಡೆಯೇ  ಬೆಯುತ್ತಿದ್ದ ಕಾರಣ ಸತ್ತು ತೀರಕ್ಕೆ ಬಂದು ಬಿದ್ದಿರುವುದಾಗಿ ಸಮುದ್ರ ತಜ್ಞರು ತಿಳಿಸಿದ್ದಾರೆ.  ಅಲ್ಲದೇ ಕ್ಯಾಲಿಫೋರ್ನಿಯಾ ಕೊಲ್ಲಿ ಕರಾವಳಿಯ 225 ಕಿಲೋಮೀಟರ್ ನಾದ್ಯಂತವಿವಿಧ ಕಡಲತೀರದಲ್ಲಿ ಇದೇ ರೀತಿಯ ವರದಿಗಳು ಬಂದಿವೆ ಸಂಶೋಧಕರೊಬ್ಬರು ತಿಳಿಸಿದ್ದಾರೆ.


ಜಾಗತಿಕ ತಾಪಮಾನ ಹಾಗೂ ನೀರಿನ ತಾಪಮಾನದ ಏರಿಕೆಯಿಂದಾಗಿ ಈ ರೀತಿಯಾಗುತ್ತಿದ್ದು, ಇದಕ್ಕೆ ಮಸ್ಸೆಲ್ ಗಳು ಮಾತ್ರವಲ್ಲ ಸ್ಟಾರ್ ಫಿಶ್ ಗಳು ಕರಗುತ್ತಿವೆ, ಚಿಪ್ಪು ಮೀನುಗಳು ಒಡೆಯುತ್ತಿವೆ. ಅಲ್ಲದೇ ಕೆಲ್ಪ್ ಮತ್ತು ಕಡಲಕಳೆಗಳು ಸಾಯುತ್ತಿವೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ