ಮಗುವಿನ ಮೂಗಿನಲ್ಲಿ ಸಿಲುಕಿದ ಗೊಂಬೆಯ ಶೂ ತೆಗೆದ ವೈದ್ಯ ನೀಡಿದ ಬಿಲ್ ಎಷ್ಟು ಗೊತ್ತಾ?
ಶುಕ್ರವಾರ, 6 ಡಿಸೆಂಬರ್ 2019 (09:06 IST)
ವಾಷಿಂಗ್ಟನ್ : ಮಗುವಿನ ಮೂಗಿನಲ್ಲಿ ಗೊಂಬೆಯ ಶೂ ಸಿಕ್ಕಿಹಾಕಿಕೊಂಡಿದ್ದು ಅದನ್ನು ತೆಗೆಯಲು ವೈದ್ಯರೊಬ್ಬರು 3000ಡಾಲರ್(2.13 ಲಕ್ಷ ರೂ) ಬಿಲ್ ಮಾಡಿರುವ ಘಟನೆ ಲಾಸ್ ವೆಗಾಸ್ ನಲ್ಲಿ ನಡೆದಿದೆ.
ಗೊಂಬೆಯ ಜೊತೆ ಆಟವಾಡುತ್ತಾ ಮಗು ಅದರ ಮೂಗಿನಲೊಳಗೆ ಗೊಂಬೆಯ 2 ಶೂವನ್ನು ಹಾಕಿಕೊಂಡಿದೆ. ಒಂದು ಶೂವನ್ನು ತೆಗೆದ ತಾಯಿಗೆ ಇನ್ನೊಂದು ತೆಗೆಯಲು ಆಗದ ಕಾರಣ ಹೆಂಡರ್ಸನ್ ನಲ್ಲಿರುವ ಸೆಂಟ್ ರೋಸ್ ಡೊಮಿನಿಕೇನ್ ಸೈನಾ ಕ್ಯಾಂಪಸ್ ನಲ್ಲಿರುವ ಡಿಗ್ನಿಟಿ ಹೆಲ್ತ್ ಸೆಂಟರ್ ಗೆ ಕರೆದುಕೊಂಡು ಹೋಗಿದ್ದಾಳೆ.
ಅಲ್ಲಿ ಮಗುವಿನ ಮೂಗಿನಿಂದ ಶೂ ತೆಗೆದ ವೈದ್ಯರು 3000ಡಾಲರ್(2.13 ಲಕ್ಷ ರೂ) ಬಿಲ್ ನೀಡಿದ್ದಾರೆ. ಬಳಿಕ ತಾಯಿ ಈ ಬಗ್ಗೆ ಚರ್ಚಿಸಿದಾಗ ಬಿಲ್ ನ್ನು 1.21 ಲಕ್ಷ ರೂ ಗೆ ಕಡಿಮೆ ಮಾಡಿದ್ದಾರೆ ಎನ್ನಲಾಗಿದೆ.