ಮಾಜಿ ಪ್ರಿಯಕರ ಬರೆದಿದ್ದ ಪತ್ರಗಳನ್ನು ಸುಟ್ಟು ಹಾಕಲು ಹೋಗಿ ಯುವತಿ ಮಾಡಿದ್ದೇನು ಗೊತ್ತಾ?
ಭಾನುವಾರ, 22 ಸೆಪ್ಟಂಬರ್ 2019 (09:03 IST)
ಅಮೇರಿಕಾ : ಯುವತಿಯೊಬ್ಬಳು ಮಾಜಿ ಪ್ರಿಯಕರ ಬರೆದಿದ್ದ ಪತ್ರಗಳನ್ನು ಸುಟ್ಟು ಹಾಕಲು ಹೋಗಿ ಇಡಿ ಮನೆಗೆ ಬೆಂಕಿ ಹಚ್ಚಿದ ಘಟನೆ ಅಮೆರಿಕಾದ ನೆಬ್ರಸ್ಕಾ ರಾಜ್ಯದ ಲಿಂಕನ್ ನಗರದಲ್ಲಿ ನಡೆದಿದೆ.
ಅರಿಯೌನಾ ಲಿಲ್ಲಾರ್ಡ್ ಎಂಬ 19 ವರ್ಷದ ಯುವತಿ ಹಳೆಯ ಬಾಯ್ ಫ್ರೆಂಡ್ ಬರೆದಿದ್ದ ಲವ್ ಲೆಟರ್ಗಳನ್ನು ಸುಟ್ಟು ಹಾಕಲೆದು ನಿರ್ಧರಿಸಿ ಬೆಡ್ ರೂಂನ ಕಾರ್ಪೆಟ್ ಮೇಲೆ ಪತ್ರಗಳನ್ನು ಇಟ್ಟು ಬೆಂಕಿ ಹಚ್ಚಿದ್ದಾಳೆ.
ಬಳಿಕ ಅಲ್ಲಿಂದ ತೆರಳಿದ ಆಕೆ ನಿದ್ರೆಗೆ ಜಾರಿದ್ದಾಳೆ. ಇತ್ತ ಕಾರ್ಪೆಟ್ ಗೆ ತಗುಲಿ ಬೆಂಕಿ ಇಡಿ ಮನೆಗೆ ಆವರಿಸಿದೆ. ತಕ್ಷಣ ಎಚ್ಚರವಾದ ಆಕೆ ಬೆಂಕಿ ಕಂಡು ಮನೆಯಿಂದ ಹೊರಗೆ ಬಂದು ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ ಕಾರಣ ಬೆಂಕಿ ನಂದಿಸಲಾಗಿದೆ ಎನ್ನಲಾಗಿದೆ.