ಮೂರನೇ ಬಾರಿ ಟರ್ಕಿ ಅಧ್ಯಕ್ಷರಾಗಿ ಅಧಿಕಾರಕ್ಕೇರಿದ ಎರ್ಡೊಗನ್
ಸೋಮವಾರ, 29 ಮೇ 2023 (12:06 IST)
ಅಂಕಾರ : ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿದ್ದು, ಈ ಮೂಲಕ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಮೇ 14 ರಂದು ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಎರ್ಡೊಗನ್ ಮತ್ತು ಪ್ರತಿಸ್ಪರ್ಧಿ ಕೆಮಾಲ್ ಕಿಲಿಕ್ಡರೊಗ್ಲ ಗೆಲುವಿಗೆ ಅಗತ್ಯವಿರುವ ಬಹುಮತ ಪಡೆಯಲಿಲ್ಲ. ಈ ಹಿನ್ನೆಲೆಯಲ್ಲಿ 2 ನೇ ಸುತ್ತಿನ ಮತದಾನ ಭಾನುವಾರ ನಡೆದಿದೆ. ಇದರಲ್ಲಿ ಎರ್ಡೋಗನ್ ಅವರು ವಿರೋಧ ಪಕ್ಷದ ನಾಯಕ ಕೆಮಲ್ ಕಿಲಿಕ್ಡರೊಗ್ಲು ಅವರನ್ನು ಸೋಲಿಸಿದರು.
ಭೀಕರ ಭೂಕಂಪ, ಹೆಚ್ಚಿದ ಹಣ ದುಬ್ಬರದ ಮಧ್ಯೆಯೂ ಎರ್ಡೊಗನ್ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ 20 ವರ್ಷಗಳಿಂದ ಈ ಸ್ಥಾನದ ಮೇಲಿದ್ದ ಅವರ ಹಿಡಿತ ಮೂರನೇ ದಶಕಕ್ಕೂ ಮುಂದುವರಿದಂತಿದೆ. 2017ರಲ್ಲಿ ಏಪ್ರಿಲ್ನಲ್ಲಿ ಜನಮತ ಸಂಗ್ರಹದ ಮೂಲಕ ಅಂಗೀಕರಿಸಲಾದ ನೂತನ ಸಂವಿಧಾನದ ಪ್ರಕಾರ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ.