ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆ

ಶುಕ್ರವಾರ, 9 ಜೂನ್ 2023 (13:53 IST)
ವಾಷಿಂಗ್ಟನ್ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವರ್ಗೀಕೃತ ದಾಖಲೆಗಳ ಪ್ರಕರಣದಲ್ಲಿ ಸಿಲುಕಿದ್ದು, ಅವರ ವಿರುದ್ಧ ದೋಷಾರೋಪಣೆ ಹೊರಿಸಲಾಗಿದೆ.
 
ವರ್ಗೀಕೃತ ಸರ್ಕಾರಿ ದಾಖಲೆಗಳನ್ನು ಮರಳಿಸದೇ ಹೋಗಿದ್ದು ಹಾಗೂ ಶ್ವೇತ ಭವನ ತೊರೆದ ಬಳಿಕವೂ ತಮ್ಮ ದಾಖಲೆಗಳನ್ನು ಫ್ಲೋರಿಡಾದ ನಿವಾಸದಲ್ಲೇ ಉಳಿಸಿಕೊಳ್ಳುವ ಮೂಲಕ ಕಾನೂನಿನ ಪ್ರಕ್ರಿಯೆಗೆ ಅಡಚಣೆ ಉಂಟು ಮಾಡಿದ ಆರೋಪದ ಮೇಲೆ ಫೆಡರಲ್ ಗ್ರ್ಯಾಂಡ್ ಜ್ಯೂರಿ ಟ್ರಂಪ್ ವಿರುದ್ಧ ದೋಷಾರೋಪಣೆ ಹೊರಿಸಿದೆ.

ವರ್ಗೀಕೃತ ದಾಖಲೆಗಳನ್ನು ಅನಧಿಕೃತವಾಗಿ ತಮ್ಮ ಬಳಿಯೇ ಇಟ್ಟುಕೊಂಡಿರುವುದು, ತಪ್ಪು ಹೇಳಿಕೆಗಳನ್ನು ನೀಡಿರುವುದು ಮತ್ತು ಕಾನೂನಿಗೆ ಅಡಚಣೆ ಸೇರಿದಂತೆ ಟ್ರಂಪ್ 7 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇದು ಟ್ರಂಪ್ ವಿರುದ್ಧದ 2ನೇ ದೋಷಾರೋಪಣೆ ಮಾತ್ರವಲ್ಲದೇ, ಮಾಜಿ ಅಧ್ಯಕ್ಷರ ಮೊದಲ ಫೆಡರಲ್ ದೋಷಾರೋಪಣೆಯಾಗಿದೆ. 

ಈ ಕ್ರಿಮಿನಲ್ ಪ್ರಕರಣವನ್ನು ಅಮೆರಿಕದ ಕಾನೂನು ವಿಭಾಗವೇ ಹೊರತಂದಿರುವುದರಿಂದ ಟ್ರಂಪ್ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಂದಿನ ವರ್ಷ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಟ್ರಂಪ್ಗೆ ವರ್ಗೀಕೃತ ಕಡತಗಳ ಪ್ರಕರಣ ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ