ವಾಷಿಂಗ್ಟನ್ : ಆಪಲ್ ಬಳಿಕ ಇದೀಗ ಗೂಗಲ್ ಕೂಡಾ ತನ್ನ ಕೆಲವು ಪಿಕ್ಸೆಲ್ ಫೋನ್ಗಳನ್ನು ಭಾರತದಲ್ಲಿ ತಯಾರಿಸಲು ಯೋಜಿಸುತ್ತಿದೆ.
ಗೂಗಲ್ ಭಾರತದಲ್ಲಿಯೇ ಸುಮಾರು 5 ಲಕ್ಷದಿಂದ 10 ಲಕ್ಷದವರೆಗೆ ಪಿಕ್ಸೆಲ್ ಫೋನ್ಗಳನ್ನು ತಯಾರಿಸುವ ಬಗ್ಗೆ ಯೋಜನೆ ರೂಪಿಸಿರುವುದಾಗಿ ವರದಿಯಾಗಿದೆ.
ಜಾಗತಿಕ ಬೇಡಿಕೆ, ಪೂರೈಕೆಯ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳನ್ನು ಉಲ್ಲೇಖಿಸಿ ಗೂಗಲ್ ಕಳೆದ 3 ವರ್ಷಗಳಿಂದ ಭಾರತದಲ್ಲಿ ತನ್ನ ಪ್ರಮುಖ ಫೋನ್ಗಳನ್ನು ಬಿಡುಗಡೆ ಮಾಡಿರಲಿಲ್ಲ.
ಇದೀಗ ಗೂಗಲ್ ತನ್ನ ಫೋನ್ಗಳನ್ನು ಭಾರತದಲ್ಲಿಯೇ ತಯಾರಿಸಲು ಯೋಜಿಸಿದ್ದು, ಇದು ಕಾರ್ಯಗತವಾಯಿತು ಎಂದಾದರೆ ಭಾರತ ವಿಧಿಸುವ ಶೇ.20 ರಷ್ಟು ಆಮದು ಸುಂಕವನ್ನು ಉಳಿತಾಯ ಮಾಡಬಹುದಾಗಿದೆ.
ಗೂಗಲ್ ಈ ಹಿಂದೆ ಪಿಕ್ಸೆಲ್ ಫೋನ್ಗಳನ್ನು ಚೀನಾದಲ್ಲಿ ತಯಾರಿಸಲು ಪ್ರಾರಂಭಿಸಿತ್ತು. 2019ರಲ್ಲಿ ಅಮೆರಿಕ ಹಾಗೂ ಚೀನಾ ನಡುವೆ ವ್ಯಾಪಾರದ ಉದ್ವಿಗ್ನತೆ ಉಂಟಾಗಿ, ತನ್ನ ತಯಾರಿಕಾ ಸ್ಥಳವನ್ನು ವಿಯೆಟ್ನಾಂಗೆ ಬದಲಾಯಿಸಲು ನಿರ್ಧರಿಸಿತ್ತು. ಆದರೂ ಕೋವಿಡ್ ಪ್ರಭಾವದಿಂದಾಗಿ ಪಿಕ್ಸೆಲ್ನ 6ನೇ ಸರಣಿಯನ್ನು ಚೀನಾದಲ್ಲಿಯೇ ತಯಾರಿಸಬೇಕಾಯಿತು.