ಆಫ್ರಿಕಾದಲ್ಲೂ ಸಿರಿವಂತಿಕೆ ಮೆರೆಯುತ್ತಿರುವ ಭಾರತೀಯ ಉದ್ಯಮಿಗಳು

ಶುಕ್ರವಾರ, 1 ಡಿಸೆಂಬರ್ 2023 (08:27 IST)
ಆಫ್ರಿಕಾದ ಟಾಪ್  ಶ್ರೀಮಂತರ  ಈ ಪಟ್ಟಿಯಲ್ಲಿ ಉದ್ಯಮಿಗಳಾದ ವಿಮಲ್‌ ಶಾ, ಸುಧೀರ್ ರೂಪಾರೆಲಿಯಾ ಮತ್ತು ನೌಶಾದ ಮೆರಾಲಿಯ ಹೆಸರು ಸೇರ್ಪಡೆಯಾಗಿದೆ.
 
ಆಫ್ರಿಕಾದ ಅಗ್ರ 50 ಶ್ರೀಮಂತರ ಪಟ್ಟಿಯಲ್ಲಿ ಭಾರತೀಯ ಮೂವರು ಉದ್ಯಮಿಗಳು ಸೇರ್ಪಡೆಯಾಗಿದ್ದಾರೆ. ಶೇರು ಮಾರುಕಟ್ಟೆಯಲ್ಲಿ ಲಾಭದ ವಹಿವಾಟು ನಡೆಯುತ್ತಿದೆ ಮತ್ತು ಹೊಸ ವ್ಯಾಪಾರ ಒಪ್ಪಂದಗಳಿಂದ ಆಫ್ರಿಕಾದಲ್ಲಿ ಹೆಚ್ಚಿನ ಉದ್ಯಮಿಗಳು ಕೋಟ್ಯಾಧೀಶರಾಗುತ್ತಿದ್ದಾರೆ.
 
ಶಾ ಈ ಪಟ್ಟಿಯಲ್ಲಿ ಮೊದಲ ಬಾರಿ ಕಾಣಿಸಿಕೊಂಡು 18ನೇ ಸ್ಥಾನಪಡೆದಿದ್ದಾರೆ. 2013ರಲ್ಲಿ ಇವರ ಆದಾಯ 1.6 ಅರಬ್‌ ಡಾಲರ್‌ ಇತ್ತು. ಸುಧೀರ್ ರೂಪಾರೆಲಿಯಾ 24ನೇ ಸ್ಥಾನದಲ್ಲಿ ಇದ್ದಾರೆ ಮತ್ತು ಇವರ ಆದಾಯ 1.1 ಅರಬ್‌ ಡಾಲರ್‌ ಇದೆ ಹಾಗೇನೆ ಮೆರಾಲಿ 43 ಕೋಟಿ ಡಾಲರ್‌ನೊಂದಿಗೆ 48 ನೇ ಸ್ಥಾನದಲ್ಲಿ ಇದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ