ದುರ್ಗಾ ಪೂಜೆ ಮಾಡಬೇಕೆಂದರೆ 3.5 ಲಕ್ಷ ಕಪ್ಪ ಕೊಡುವಂತೆ ಹಿಂದೂಗಳಿಗೆ ಬೆದರಿಕೆ

Krishnaveni K

ಬುಧವಾರ, 25 ಸೆಪ್ಟಂಬರ್ 2024 (10:08 IST)
ಢಾಕಾ: ಇನ್ನೇನು ದಸರಾ ಬರುತ್ತಿದ್ದು, ಬಾಂಗ್ಲಾದೇಶದಲ್ಲಿರುವ ಹಿಂದೂಗಳು ದಸರಾ ಹಬ್ಬ ಮಾಡುವ ಸಂಭ್ರಮದಲ್ಲಿದ್ದರು. ಆದರೆ ಅವರ ಕನಸಿಗೆ ಈಗ ಬೆದರಿಕೆಯ ಕರಿಛಾಯೆ ಎದುರಾಗಿದೆ.

ಬಾಂಗ್ಲಾದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದು, ಇವರ ಮೇಲೆ ನಿರಂತರವಾಗಿ ದಾಳಿ, ದಬ್ಬಾಳಿಕೆ ನಡೆಯುತ್ತಲೇ ಇರುತ್ತದೆ. ಹಿಂದೂಗಳ ಮೇಲೆ ಆಗುತ್ತಿರುವ ದಾಳಿ ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ಇಂತಹ ಸಂದರ್ಭದಲ್ಲಿ ದುರ್ಗಾ ಪೂಜೆಗೂ ಸಂಕಷ್ಟ ಎದುರಾಗಿದೆ.

ಒಂದೆಡೆ ಹಿಂದೂಗಳು ದುರ್ಗಾ ಪೂಜೆಗೆ ತಯಾರಿ ನಡೆಸುತ್ತಿದ್ದರೆ, ದುರ್ಗಾ ಪೂಜೆ ಸಂಘಟಕರಿಗೆ ಪೂಜೆ ಮಾಡಬೇಕೆಂದರೆ ನಮಗೆ 3.5 ಲಕ್ಷ ರೂ. ಕೊಡಬೇಕು, ಇಲ್ಲದೇ ಹೋದರೆ ದುರ್ಗಾ ಪೂಜೆ ಮಾಡಲು ಬಿಡಲ್ಲ. ನಮ್ಮ ಅಣತಿ ಮೀರಿ ಮಾಡಿದರೆ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಪೊಲೀಸರಿಗೆ ತಿಳಿಸಿದರೆ ಪರಿಣಾಮ ಚೆನ್ನಾಗಿರಲ್ಲ ಎಂದು ಬೆದರಿಕೆ ಪತ್ರಗಳು ಬರುತ್ತಲೇ ಇವೆ.

ಇದು ಹಿಂದೂಗಳನ್ನು ಚಿಂತೆಗೀಡು ಮಾಡಿದೆ. ಇದುವರೆಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾದ ದಾಳಿ, ಕೊಲೆ, ಹಲ್ಲೆಗಳಿಗೆ ಸೂಕ್ತ ರೀತಿಯ ಶಿಕ್ಷೆಯಾಗಿಯೇ ಇಲ್ಲ. ಹೀಗಾಗಿ ಹಿಂದೂಗಳಿಗೆ ಇಲ್ಲಿ ರಕ್ಷಣೆಯೇ ಇಲ್ಲ ಎಂಬ ಪರಿಸ್ಥಿತಿಯಿದೆ. ಹೀಗಿರುವಾಗ ಬೆದಿಕೆ ಪತ್ರಗಳನ್ನು ಮೀರಿ ದುರ್ಗಾ ಪೂಜೆ ಮಾಡುವುದು ಹೇಗೆ ಎಂಬ ಭಯಕ್ಕೆ ಬಿದ್ದಿರುವ ಕೆಲವು ಸಂಘಟನೆಗಳು ಪೂಜೆಯನ್ನೇ ರದ್ದು ಮಾಡುವ ತೀರ್ಮಾನಕ್ಕೆ ಬಂದಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ