ಡ್ಯಾನ್ಸ್, ಮಾಡೆಲಿಂಗ್ ಮಾಡಿದ್ದ ತಂಗಿಯನ್ನೇ ಕೊಂದು ಹಾಕಿದ ಅಣ್ಣ
ಇದೂ ಒಂದು ರೀತಿಯಲ್ಲಿ ಮರ್ಯಾದೆ ಹತ್ಯೆ. ಕಟ್ಟಾ ಸಾಂಪ್ರದಾಯಿಕ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ ಮಹಿಳೆಯರು ಮಾಡೆಲಿಂಗ್ ಮಾಡುವುದು, ಅಂಗ ಪ್ರದರ್ಶನ ಮಾಡುವುದಕ್ಕೆಲ್ಲಾ ನಿರ್ಬಂಧವಿದೆ.
ಹೀಗಾಗಿ ಮಾಡೆಲಿಂಗ್ ಮಾಡಲು ಹೊರಟಿದ್ದ 21 ವರ್ಷದ ಯುವತಿಯನ್ನು ಆಕೆಯ ಅಣ್ಣನೇ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಪಂಜಾಬ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಇದೀಗ ಅಣ್ಣನ ವಿರುದ್ಧ ಪ್ರಕರಣ ದಾಖಲಾಗಿದೆ.