ಮಲಗಿದ್ದಾಗಲೂ ಮೈಕ್ರೋಫೋನ್ ಆನ್!

ಬುಧವಾರ, 10 ಮೇ 2023 (16:22 IST)
ವಾಷಿಂಗ್ಟನ್  : ಟ್ವಿಟ್ಟರ್ನಲ್ಲಿ ಹೊಸ ಹೊಸ ಫೀಚರ್ಗಳನ್ನು ತರುವಲ್ಲಿ ಗಮನಹರಿಸುತ್ತಿರುವ ಸಿಇಒ ಎಲೋನ್ ಮಸ್ಕ್ ಮೆಸೆಜಿಂಗ್ ಪ್ಲಾಟ್ಫಾರ್ಮ್ ವಾಟ್ಸಪ್ ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ.
 
ವಾಟ್ಸಪ್ ಅನ್ನು ನಂಬಬೇಡಿ ಎಂಬ ಎಚ್ಚರಿಕೆಯನ್ನು ಬಳಕೆದಾರರಿಗೆ ನೀಡಿದ್ದಾರೆ. ವಾಟ್ಸಪ್ ಅನ್ನು ಸಕ್ರಿಯವಾಗಿ ಬಳಸಲಾಗುತ್ತಿಲ್ಲವಾದರೂ ತಾವು ಮಲಗಿದ್ದಾಗ ಬ್ಯಾಕ್ಗ್ರೌಂಡ್ನಲ್ಲಿ ಮೈಕ್ರೋಫೋನ್ ಕಾರ್ಯನಿರ್ವಹಿಸುತ್ತಿರುತ್ತದೆ ಎಂದು ಟ್ವಿಟ್ಟರ್ನ ಎಂಜಿನಿಯರ್ ಒಬ್ಬರು ಕಳವಳ ವ್ಯಕ್ತಪಡಿಸಿದ್ದರು.

ಇದಕ್ಕೆ ಟ್ವಿಟ್ಟರ್ ಸಿಇಒ ಎಲೋನ್ ಮಸ್ಕ್ ವಾಟ್ಸಪ್ ಅನ್ನು ನಂಬೋದು ಅಸಾಧ್ಯ ಎಂದಿದ್ದಾರೆ. ಟ್ವಿಟ್ಟರ್ನ ಎಂಜಿನಿಯರ್ ಫೋಡ್ ಡಬೀರ್ ತನ್ನ ವಾಟ್ಸಪ್ ಅಪ್ಲಿಕೇಶನ್ ಅನ್ನು ಸಕ್ರಿಯವಾಗಿ ಬಳಕೆ ಮಾಡದೇ ಇರುತ್ತಿರುವಾಗಲೂ, ತಾವು ಮಲಗಿದ್ದ ಸಮಯದಲ್ಲೂ ನಿರಂತರವಾಗಿ ಮೈಕ್ರೋಫೋನ್ ಬ್ಯಾಕ್ಗ್ರೌಂಡ್ನಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ ಎಂದು ಆಘಾತಕಾರಿ ವಿಷಯವನ್ನು ತಿಳಿಸಿದ್ದಾರೆ.

ಜೊತೆಗೆ ಇದಕ್ಕೆ ಸಂಬಂಧಪಟ್ಟಿರುವ ಸ್ಕ್ರೀನ್ಶಾಟ್ ಅನ್ನು ಕೂಡಾ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಎಲೋನ್ ಮಸ್ಕ್, ಯಾವುದನ್ನೂ ನಂಬಬೇಡಿ ಎಂದು ಪರೋಕ್ಷವಾಗಿ ವಾಟ್ಸಪ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ