ವಾಟ್ಸಪ್‌ನ ನಂಬಬೇಡಿ ಎಂದ ಎಲೋನ್ ಮಸ್ಕ್

ಗುರುವಾರ, 11 ಮೇ 2023 (09:17 IST)
ಎಲೋನ್ ಮಸ್ಕ್ ವಾಟ್ಸಪ್ ಅನ್ನು ನಂಬಬೇಡಿ ಎಂದು ಹೇಳಿದ ಬಳಿಕ ಈ ಆರೋಪವನ್ನು ತಳ್ಳಿ ಹಾಕಿರುವ ವಾಟ್ಸಪ್, ಬಳಕೆದಾರರು ತಮ್ಮ ಮೈಕ್ ಸೆಟ್ಟಿಂಗ್ಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದಾರೆ.
 
ಒಮ್ಮೆ ಬಳಕೆದಾರರು ಅನುಮತಿ ನೀಡಿದರೆ, ಕರೆ ಮಾಡುವಾಗ, ಧ್ವನಿಯ ಸಂದೇಶ ಅಥವಾ ವೀಡಿಯೋ ರೆಕಾರ್ಡ್ ಮಾಡುವಾಗ ಮಾತ್ರವೇ ವಾಟ್ಸಪ್ ಮೈಕ್ಗೆ ಪ್ರವೇಶ ಪಡೆದುಕೊಳ್ಳುತ್ತದೆ. ಆದರೂ ಈ ಎಲ್ಲಾ ಸಂವಹನವನ್ನು ‘ಎಂಡ್ ಟು ಎಂಡ್ ಎನ್ಕ್ರಿಪ್ಶನ್’ನಿಂದ ರಕ್ಷಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ನಾವು ಕಳೆದ 24 ಗಂಟೆಗಳಿಂದ ಟ್ವಿಟ್ಟರ್ನ ಎಂಜಿನಿಯರ್ನೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರು ತಮ್ಮ ಪಿಕ್ಸೆಲ್ ಫೋನ್ ಹಾಗೂ ವಾಟ್ಸಪ್ನೊಂದಿಗೆ ಸಮಸ್ಯೆ ಇರುವುದಾಗಿ ಪೋಸ್ಟ್ ಮಾಡಿದ್ದಾರೆ. ಇದು ಆಂಡ್ರಾಯ್ಡ್ನ ದೋಷವಾಗಿದ್ದು, ಇದರ ತನಿಖೆ ಹಾಗೂ ಪರಿಹಾರಕ್ಕೆ ಗೂಗಲ್ ಅನ್ನು ಕೇಳಿಕೊಂಡಿದ್ದೇವೆ ಎಂದು ವಾಟ್ಸಪ್ ತಿಳಿಸಿದೆ. 

ಆದರೂ ಹಲವಾರು ವಾಟ್ಸಪ್ ಬಳಕೆದಾರರು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ದೂರಿದ್ದಾರೆ. ಈ ಹಿಂದೆ ವಾಟ್ಸಪ್ ಗೌಪ್ಯತೆಯ ಸಮಸ್ಯೆಗಳನ್ನು ಎದುರಿಸಿದೆ. ಫೋನ್ ಸಂಖ್ಯೆ, ಸಾಧನದ ಮಾಹಿತಿ, ಸ್ಥಳ, ಸಂಪರ್ಕಗಳಂತಹ ಕೆಲವು ಬಳಕೆದಾರರ ಡೇಟಾವನ್ನು ಅದರ ಮಾತೃ ಕಂಪನಿ ಮೆಟಾದೊಂದಿಗೆ ಹಂಚಿಕೊಂಡಿರುವುದಾಗಿ ವರದಿಯಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ