ಮಗುವಿನ ಪ್ರಾಣ ರಕ್ಷಿಸಿ ದೇಶದ ಪೌರತ್ವ ಪಡೆದ ಮುಮೌಡ್‌ ಗಸ್ಸಮ್‌

ಮಂಗಳವಾರ, 29 ಮೇ 2018 (17:20 IST)
ಪ್ಯಾರಿಸ್: ಪ್ಯಾರಿಸ್ ನಲ್ಲಿ ತನ್ನ ಪ್ರಾಣವನ್ನು ಪಣಕ್ಕಿಟ್ಟು ಮಗುವಿನ ಪ್ರಾಣ ರಕ್ಷಿಸಿದ ಪರ ದೇಶದ ನಿರಾಶ್ರಿತ ವ್ಯಕ್ತಿಯೊಬ್ಬ ಈ ಮೂಲಕ ಇದೀಗ ಫ್ರಾನ್ಸ್‌ ದೇಶದ ಪೌರತ್ವವನ್ನು ಪಡೆದಿದ್ದಾನೆ.


ಶನಿವಾರ ರಾತ್ರಿ ಪ್ಯಾರಿಸ್ ನ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಆಕಸ್ಮಿಕವಾಗಿ ಜಾರಿ ಕಂಬಿಯಲ್ಲಿ ನೇತಾಡುತ್ತಿದ್ದ ನಾಲ್ಕು ವರ್ಷದ ಮಗುವನ್ನು ಮಾಲಿ ದೇಶದ ನಿರಾಶ್ರಿತ ಮುಮೌಡ್‌ ಗಸ್ಸಮ್‌ ಎಂಬಾತ ತನ್ನ ಪ್ರಾಣವನ್ನು ಲೆಕ್ಕಿಸದೇ ರಕ್ಷಿಸಿ 'ಫ್ರಾನ್ಸ್‌ನ ಸ್ಪೈಡರ್‌ಮ್ಯಾನ್‌’ ಎನಿಸಿಕೊಂಡಿದ್ದಾನೆ. ಇವನ ಈ ಸಾಹಸ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.


ಇವನ ಈ ಕಾರ್ಯಕ್ಕೆ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರೋನ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿ ಆತನನ್ನು ಅರಮನೆಗೆ ಕರೆಸಿಕೊಂಡು ಶೌರ್ಯಪ್ರಶಸ್ತಿ ಪ್ರಕಟಿಸಿ, ಅಗ್ನಿಶಾಮಕ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಮತ್ತು ದೇಶದ ಪೌರತ್ವ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ