ಪಾಕಿಸ್ತಾನದ ಚಿನ್ನದ ಹುಡುಗ ನದೀಮ್‌ಗೆ ವಿಶೇಷ ನಂಬರ್‌ನ ಕಾರು ಗಿಫ್ಟ್‌ ಕೊಟ್ಟ ಸರ್ಕಾರ

Sampriya

ಮಂಗಳವಾರ, 13 ಆಗಸ್ಟ್ 2024 (17:47 IST)
Photo Courtesy X
ಮಿಯಾನ್ ಚನ್ನು: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಪಾಕಿಸ್ತಾನದ ಅರ್ಷದ್‌ ನದೀಮ್ ಮನೆಗೆ ಪಂಜಾಬ್ ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರು ಭೇಟಿ ಕೊಟ್ಟು ಅಭಿನಂದಿಸಿದರು. ಈ ವೇಳೆ ಅರ್ಷದ್‌ಗೆ 10 ಮಿಲಿಯನ್ ಚೆಕ್ ಹಾಗೂ ಹೊಸ ಹೋಂಡಾ ಸಿವಿಕ್ ಕಾರನ್ನು ಉಡುಗೊರೆಯಾಗಿ ನೀಡಿದರು.

ಮಂಗಳವಾರ ಸಿಎಂ ಮರ್ಯಮ್ ನವಾಜ್ ಅವರು ಹೆಲಿಕಾಪ್ಟರ್‌ನಲ್ಲಿ ಖನೇವಾಲ್ ಜಿಲ್ಲೆಯ 101/15.ಎಲ್ ಗ್ರಾಮವನ್ನು ತಲುಪಿದರು. ಅವರನ್ನು ನದೀಮ್ ಅವರ ಕುಟುಂಬ ಸ್ವಾಗತಿಸತು. ಈ ವೇಳೆ ನದೀಮ್ ಅವರ ಸಾಧನೆಯನ್ನು ಪ್ರಶಂಸಿದರು. ನದೀಮ್ ತಾಯಿ ರಜಿಯಾ ಪರ್ವೀನ್ ಅವರನ್ನು ತಬ್ಬಿ ಅಭಿನಂದಿಸಿದರು.

ಮರ್ಯಮ್ ನವಾಜ್ ಅವರ ವಿಶೇಷ ಸೂಚನೆಯ ಮೇರೆಗೆ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 27 ವರ್ಷದ ನದೀಮ್ ಅವರ ದೈತ್ಯಾಕಾರದ ಜಾವೆಲಿನ್ ಥ್ರೋ 92.97 ಮೀಟರ್‌ಗಳ ಸ್ಮರಣಾರ್ಥವಾಗಿ ಕಾರಿಗೆ "PAK 92.97" ಎಂಬ ನಂಬರ್ ಪ್ಲೇಟ್ ಅನ್ನು ನೀಡಲಾಗಿದೆ.

ಪಂಜಾಬ್ ಸಿಎಂ ಮರ್ಯಮ್ ನವಾಜ್ 'PAK 92.97' ನಂಬರ್ ಪ್ಲೇಟ್ ಹೊಂದಿರುವ ಹೊಚ್ಚ ಹೊಸ ಹೋಂಡಾ ಸಿವಿಕ್‌ನ ಕೀಲಿಯನ್ನು ನವಾಜ್‌ಗೆ ನೀಡಿದರು.

ಅದಲ್ಲದೆ, ಅವರು ಅರ್ಷದ್ ನದೀಮ್ ಅವರ ಕೋಚ್ ಸಲ್ಮಾನ್ ಇಕ್ಬಾಲ್ ಬಟ್ ಅವರನ್ನು ಹೊಗಳಿದರು ಮತ್ತು ಅವರಿಗೆ 5 ಮಿಲಿಯನ್ ಚೆಕ್ ನೀಡಿದರು. ಅರ್ಷದ್ ನದೀಮ್ ದೇಶಕ್ಕೆ ಅಭೂತಪೂರ್ವ ಸಂತೋಷ ತಂದಿದ್ದಾರೆ ಎಂದು ಹಾಡಿ ಹೊಗಳಿದರು.

ಆಗಸ್ಟ್ 8 ರಂದು ನಡೆದ ಜಾವೆಲಿನ್ ಎಸೆತದಲ್ಲಿ ಅರ್ಷದ್ ನದೀಮ್ ಅವರು   32 ವರ್ಷಗಳ ನಂತರ ಪಾಕಿಸ್ತಾನಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟು ಇತಿಹಾಸ ನಿರ್ಮಿಸಿದರು. ಅದಲ್ಲದೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 92.97 ಳಲ್ಲಿ ಮೀಟರ್ ದೂರ ಎಸೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ