India Pakistan: ಸಿಂಧೂ ನದಿಯಲ್ಲಿ ಏನೇ ನಿರ್ಮಾಣ ಮಾಡಿದರೂ ಭಾರತದ ಮೇಲೆ ದಾಳಿ ಮಾಡ್ತೇವೆ: ಪಾಕ್ ಸಚಿವ

Krishnaveni K

ಶನಿವಾರ, 3 ಮೇ 2025 (16:29 IST)
ಇಸ್ಲಾಮಾಬಾದ್: ಸಿಂಧೂ ನದಯಲ್ಲಿ ಏನೇ ನಿರ್ಮಾಣ ಮಾಡಿದರೂ ಭಾರತದ ಮೇಲೆ ದಾಳಿ ಮಾಡುತ್ತೇವೆ ಎಂದು ಪಾಕಿಸ್ತಾನ ಸಚಿವ ಖವಾಜ ಅಸಿಫ್ ಬೆದರಿಕೆ ಹಾಕಿದ್ದಾರೆ.

ಪಹಲ್ಗಾಮ್ ದಾಳಿ ಬಳಿಕ ಭಾರತ ಸಿಂಧೂ ನದಿ ಒಪ್ಪಂದ ಮುರಿದುಕೊಂಡು ಪಾಕಿಸ್ತಾನಕ್ಕೆ ಹೊಡೆತ ನೀಡಿತ್ತು. ಪಾಕಿಸ್ತಾನದ ಶೇ.80 ರಷ್ಟು ನೀರಿನ ಅಗತ್ಯಗಳನ್ನು ಸಿಂಧೂ ನದಿ ಪೂರೈಸುತ್ತಿತ್ತು. ಆದರೆ ಈಗ ಸಿಂಧೂ ನದಿ ನೀರು ಸ್ಥಗಿತಗೊಳಿಸುವ ಭಾರತದ ನಿರ್ಧಾರ ಪಾಕಿಸ್ತಾನಕ್ಕೆ ದೊಡ್ಡ ಹೊಡೆತವಾಗಿದೆ.

ಇದೇ ಕಾರಣಕ್ಕೆ ಪಾಕ್ ಸಚಿವ ಆಸಿಫ್ ಈಗ ಬೆದರಿಕೆಯ ಮಾರ್ಗ ಹಿಡಿದಿದ್ದಾರೆ. ಸಿಂಧೂ ನದಿ ನೀರು ಪಾಕಿಸ್ತಾನಕ್ಕೆ ಹರಿಯದಂತೆ ತಡೆಯಲು ಭಾರತ ಹೊಸ ನಿರ್ಮಾಣಗಳನ್ನು ಮಾಡಲೇಬೇಕು. ಆದರೆ ಆ ರೀತಿ ಮಾಡಿದಲ್ಲಿ ದಾಳಿ ಮಾಡುವುದಾಗಿ ಎಚ್ಚರಿಕೆ ನೀಡಿದೆ.

ಹೊಸ ನಿರ್ಮಾಣಗಳನ್ನು ಮಾಡಿದರೆ ಅದು ಸಿಂಧೂ ನದಿ ಒಪ್ಪಂದವನ್ನು ಮುರಿದಂತೆ ಎಂದು ನಾವು ಅಂದುಕೊಳ್ಳಬೇಕಾಗುತ್ತದೆ. ಹೀಗಾದಲ್ಲಿ ಭಾರತಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ