ಬಾಂಬ್ ಸುಮ್ನೇ ಇಟ್ಕೊಂಡಿಲ್ಲ, ನೀರು ಕೊಡದಿದ್ರೆ ಪರಮಾಣು ಬಾಂಬ್ ಹಾಕ್ತೀವಿ: ಭಾರತಕ್ಕೆ ಎಚ್ಚರಿಕೆ ನೀಡಿದ ಪಾಕಿಸ್ತಾನ

Krishnaveni K

ಭಾನುವಾರ, 27 ಏಪ್ರಿಲ್ 2025 (13:37 IST)
Photo Credit: X
ನವದೆಹಲಿ: ನಾವು ಪರಮಾಣು ಬಾಂಬ್, ಕ್ಷಿಪಣಿಗಳನ್ನು ಸುಮ್ನೇ ಇಟ್ಕೊಂಡಿಲ್ಲ. ಸಿಂಧೂ ನದಿ ನೀರು ಬಂದ್ ಮಾಡಿದ್ರೆ ಯುದ್ಧಕ್ಕೆ ಸಿದ್ಧ ಎಂದು ಭಾರತಕ್ಕೆ ಪಾಕಿಸ್ತಾನದ ಸಚಿವ ಹನೀಫ್ ಅಬ್ಬಾಸ್ ಎಚ್ಚರಿಕೆ ನೀಡಿದ್ದಾರೆ.

ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಾದ ಬಳಿಕ ಪಾಕಿಸ್ತಾನದ ವಿರುದ್ಧ ಭಾರತ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ ಸಿಂಧೂ ನದಿ ನೀರು ಒಪ್ಪಂದ ರದ್ದುಗೊಳಿಸಿರುವುದು ಪ್ರಮುಖವಾಗಿದೆ. ಇದರಿಂದಾಗಿ ಈಗ ಪಾಕಿಸ್ತಾನಕ್ಕೆ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ.

ಇದು ಪಾಕಿಸ್ತಾನವನ್ನು ರೊಚ್ಚಿಗೇಳಿಸಿದ್ದು, ದಿನಕ್ಕೊಬ್ಬರಂತೆ ನದಿ ನೀರು ಬಿಡುವಂತೆ ಭಾರತಕ್ಕೆ ಬೆದರಿಕೆ ಹಾಕುತ್ತಲೇ ಇದ್ದಾರೆ. ನಿನ್ನೆಯಷ್ಟೇ ಬಿಲಾವಲ್ ಭುಟ್ಟೋ ನದಿ ನೀರು ಹರಿಸದಿದ್ದರೆ ರಕ್ತಪಾತ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಇಂದು ಸಚಿವ ಹನೀಫ್ ಅಬ್ಬಾಸ್ ಸರದಿ. ‘ನಮ್ಮ ಬಳಿಯೂ ಪರಮಾಣು ಬಾಂಬ್ ಇದೆ. ಕ್ಷಿಪಣಿಗಳು, ಬಾಂಬ್ ಗಳನ್ನು ಸುಮ್ಮನೇ ಇಟ್ಟುಕೊಂಡಿಲ್ಲ. ನಮ್ಮ ನೀರು ಬಿಡದೇ ಇದ್ದರೆ ಅದನ್ನು ಬಳಸಲೂ ಸಿದ್ಧ’ ಎಂದು ಯುದ್ಧ ಮಾಡುವ ಮಾತನಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ