41 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಕಟ್ಟದೆ ಬಾಕಿ ಇಟ್ಟುಕೊಂಡ ಪಾಕ್ ಪ್ರಧಾನಿ

ಶುಕ್ರವಾರ, 30 ಆಗಸ್ಟ್ 2019 (10:52 IST)
ಪಾಕಿಸ್ತಾನ : ಆರ್ಥಿಕ ಸಂಕಷ್ಟಕ್ಕೀಡಾಗಿರುವ ಪಾಕಿಸ್ತಾದಲ್ಲಿ ಇದೀಗ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಳಿ ತಮ್ಮ ಸಚಿವಾಲಯದ ಕರೆಂಟ್ ಬಿಲ್ ಕಟ್ಟಲು ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆಯಂತೆ.



ಯಾವುದೇ ರಾಷ್ಟ್ರಗಳು ಪಾಕಿಸ್ತಾನದ ನೆರವಿಗೆ ನಿಲ್ಲದ ಹಿನ್ನಲೆಯಲ್ಲಿ ಪಾಕಿಸ್ತಾನಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಅಲ್ಲದೇ ಇಮ್ರಾನ್ ಖಾನ್ ಸಚಿವಾಲಯ 41 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಪಾವತಿ ಮಾಡದ ಹಿನ್ನಲೆಯಲ್ಲಿ  ಬಾಕಿ 41 ಲಕ್ಷ ರೂಪಾಯಿ ಕೂಡಲೇ ಪಾವತಿಸುವಂತೆ ಇಸ್ಲಾಮಾಬಾದ್ ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ(ಐಇಎಸ್ ಸಿಒ) ಬುಧವಾರ ನೋಟಿಸ್ ಜಾರಿ ಮಾಡಿದೆ ಎಂದು ಪಾಕ್ ಮಾಧ್ಯಮವೊಂದು ವರದಿ ಮಾಡಿದೆ. 


ಈಗಾಗಲೇ ಪಾಕಿಸ್ತಾದಲ್ಲಿ ಸರ್ಕಾರಿ ಸಭೆಗಳಲ್ಲಿ ಕಾಫಿ,ಬಿಸ್ಕೆಟ್ ಗಳ್ನು ನಿಷೇಧಿಸಲಾಗಿದೆ. ಅಲ್ಲದೆ ತಮ್ಮ ಆರ್ಥಿಕ ಸಮಸ್ಯೆಯನ್ನು ಸರಿದೂಗಿಸಲು ಕತ್ತೆಗಳನ್ನು, ಬೀದಿನಾಯಿಗಳನ್ನು ರಪ್ತು ಮಾಡಲು ಮುಂದಾಗಿದೆ.


 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ