ಉಕ್ರೇನ್ ಅನ್ನು ಸರ್ವನಾಶ ಮಾಡುವುದಾಗಿ ಪಣ ತೊಟ್ಟಿರುವ ರಷ್ಯಾ, ಮುಂದಿನ ದಿನಗಳಲ್ಲಿ ಶಕ್ತಿಶಾಲಿ ಬಾಂಬ್ಗಳ ದಾಳಿ ಮಾಡುವ ಮೂಲಕ ಉಕ್ರೇನ್ ಅನ್ನು ಧ್ವಂಸಗೊಳಿಸಲಿದೆ ಎಂಬ ಆತಂಕ ಜಾಗತಿಕ ಸಮುದಾಯದಲ್ಲಿ ಶುರುವಾಗಿದೆ.
ಅದರಲ್ಲೂ, 'ಎಲ್ಲ ಬಾಂಬ್ಗಳ ತಾಯಿ' (ಮದರ್ ಆಫ್ ಆಲ್ ಬಾಂಬ್ಸ್) ಎಂದೇ ಖ್ಯಾತಿಯಾದ 'ಥರ್ಮೋಬಾರಿಕ್' ಬಾಂಬ್ಗಳನ್ನು ಬಳಸುವ ಭೀತಿ ಎದುರಾಗಿದೆ.
ಒಬ್ಬ ವ್ಯಕ್ತಿ ನೀರಿನಲ್ಲಿ ಮುಳುಗುತ್ತಾನೆ. ಆತನ ದೇಹದ ಎಲ್ಲ ಆಮ್ಲಜನಕವು ಕ್ಷಣಮಾತ್ರದಲ್ಲಿ ಹೊರಗೆ ಬರುತ್ತದೆ. ಆಗ ಮತ್ತೊಮ್ಮೆ ಉಸಿರಾಡುತ್ತಾನೆ.
ನಂತರ, ನೀರು ಆತನ ದೇಹವನ್ನು ಪ್ರವೇಶಿಸುವ ಬದಲು ವಿಷಕಾರಿ ಕಣಗಳು ಒಳಹೊಕ್ಕಾಗ ಆಗುವ ಅನುಭವವನ್ನೇ ಥರ್ಮೋಬಾರಿಕ್ ಬಾಂಬ್ ಸ್ಫೋಟದಿಂದ ಆಗುತ್ತದೆ ಎಂದೇ ವಿಶ್ಲೇಷಿಸಲಾಗಿದೆ. ಇದುವರೆಗೆ ಸಿರಿಯಾ ಮೇಲೆ ಮಾತ್ರ ರಷ್ಯಾ ಈ ಬಾಂಬ್ ಬಳಸಿದೆ ಎಂದು ತಿಳಿದುಬಂದಿದೆ.