ಉದ್ಯೋಗಿಗಳನ್ನೇ ಕಂಪನಿಯಿಂದ ಕಿತ್ತೊಗೆದ ಸ್ಪೇಸ್ಎಕ್ಸ್!
ಮಸ್ಕ್ ಅವರ ನಡವಳಿಕೆ ಮುಜುಗರಕ್ಕೀಡು ಮಾಡುತ್ತಿದೆ ಎಂದು ಉದ್ಯೋಗಿಗಳು ಟೀಕಿಸಿದ್ದು, ಈ ಹಿನ್ನೆಲೆ ಟೀಕಿಸಿರುವ ಸ್ಪೇಸ್ಎಕ್ಸ್ನ ಉದ್ಯೋಗಿಗಳನ್ನೇ ವಜಾ ಮಾಡಿರುವುದಾಗಿ ತಿಳಿದು ಬಂದಿದೆ.
ಇತ್ತೀಚೆಗೆ ಸ್ಪೇಸ್ಎಕ್ಸ್ನ ಕೆಲ ಉದ್ಯೋಗಿಗಳು ಮಸ್ಕ್ ಅವರ ನಡವಳಿಕೆ ಆಗಾಗ ಗೊಂದಲ ಹಾಗೂ ಮುಜುಗರಕ್ಕೀಡು ಮಾಡುತ್ತದೆ ಎಂದು ತೆರೆದ ಪತ್ರದಲ್ಲಿ ತಿಳಿಸಿದ್ದಾರೆ. ಎಲೋನ್ ಮಸ್ಕ್ ಕಳುಹಿಸುವ ಪ್ರತಿಯೊಂದು ಟ್ವೀಟ್ ಕೂಡಾ ಸಾರ್ವಜನಿಕ ಹೇಳಿಕೆಯಾಗಿದೆ.
ಇದು ನಮ್ಮ ಕೆಲಸ, ಧ್ಯೇಯ ಅಥವಾ ಮೌಲ್ಯಗಳನ್ನು ಬಿಂಬಿಸುವುದಿಲ್ಲ ಎಂಬುದನ್ನು ನಮ್ಮ ತಂಡಕ್ಕೆ ಸ್ಪಷ್ಟಪಡಿಸುವುದು ಕಷ್ಟವಾಗಿದೆ ಎಂದು ಹೇಳಿದ್ದಾರೆ.