Sunita Williams: ಭೂಮಿಗೆ ಬಂದಿಳಿದ ಸುನಿತಾ ವಿಲಿಯಮ್ಸ್ ಈಗ ಏನ್ಮಾಡ್ತಿದ್ದಾರೆ

Krishnaveni K

ಶುಕ್ರವಾರ, 21 ಮಾರ್ಚ್ 2025 (09:34 IST)
ಫ್ಲೋರಿಡಾ: ಬಾಹ್ಯಾಕಾಶದಲ್ಲಿ 9 ತಿಂಗಳು ಕಳೆದು ಭೂಮಿಗೆ ಬಂದಿಳಿದ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಈಗ ಏನು ಮಾಡುತ್ತಿದ್ದಾರೆ? ಇಲ್ಲಿದೆ ಡೀಟೈಲ್ಸ್.

ಬಾಹ್ಯಾಕಾಶದಿಂದ ಮೊನ್ನೆ ಬೆಳಗಿನ ಜಾವ ಸುನಿತಾ ವಿಲಿಯಮ್ಸ್ ಮತ್ತು ಮತ್ತೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್ ಇದ್ದ ನೌಕೆ ಅಮೆರಿಕಾದ ಫ್ಲೋರಿಡಾ ಸಮುದ್ರಕ್ಕೆ ಬಂದಿಳಿದಿತ್ತು. ಇದಾದ ಬಳಿಕ ಗಗನಯಾತ್ರಿಗಳನ್ನು ತಕ್ಷಣವೇ ಪುನಶ್ಚೇತನ ಕಾರ್ಯಕ್ಕೆ ಕರೆದೊಯ್ಯಲಾಯಿತು.

ಇಷ್ಟು ದಿನ ಶೂನ್ಯ ಗುರುತ್ವಾಕರ್ಷಣೆಯಲ್ಲಿದ್ದ ಗಗನಯಾತ್ರಿಗಳಿಗೆ ಮತ್ತೆ ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಅವರಿಗೆ ಕಷ್ಟವಾಗುತ್ತಿರುತ್ತದೆ. ಇದೀಗ ಗಗನಯಾತ್ರಿಗಳಿಗೆ ಮಾಂಸಖಂಡಗಳಿಗೆ ಬಲ ನೀಡುವಂತಹ ಚಟುವಟಿಕೆಗಳನ್ನು ಮಾಡಿಸಲಾಗುತ್ತಿದೆ.

ಭೂಮಿಗೆ ಬಂದ ಮೇಲೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಬಾಹ್ಯಾಕಾಶದಲ್ಲೇ ಅವರು ಕೆಲವು ವ್ಯಾಯಾಮ ಮಾಡುತ್ತಿರುತ್ತಾರೆ. ಈಗ ಪುನಶ್ಚೇತನ ಕೇಂದ್ರದಲ್ಲಿ ಅವರಿಗೆ ಗಾಜಿನ ಲೋಟದ ಬದಲು ಪ್ಲಾಸ್ಟಿಕ್ ಲೋಟದಲ್ಲೇ ಕಾಫಿ, ನೀರು ನೀಡಬೇಕಾಗುತ್ತದೆ ಎಂದು ಖ್ಯಾತ ಖಗೋಳ ಭೌತಶಾಸ್ತ್ರಜ್ಞ ನೀಲ್ ಡಿಗ್ರಾಸ್ ಟೈಸನ್ ಹೇಳಿದ್ದಾರೆ. ಇದೀಗ ಸುನಿತಾ ಹಾಗೂ ವಿಲ್ಮೋರ್ ಗೂ ಅದೇ ರೀತಿಯ ಪುನಶ್ಚೇತನ ಕಾರ್ಯ ಮಾಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ