ತಾನೇ ಸಾಕಿದ ಭಯೋತ್ಪಾದಕರಿಂದ ದಾಳಿಗೊಳಗಾದ ಪಾಕಿಸ್ತಾನ

Krishnaveni K

ಮಂಗಳವಾರ, 26 ಮಾರ್ಚ್ 2024 (10:44 IST)
Photo Courtesy: Twitter
ಇಸ್ಲಾಮಾಬಾದ್: ತಾನು ಸಾಕಿದ ಭಯೋತ್ಪಾದಕರಿಂದ ಪಾಕಿಸ್ತಾನಕ್ಕೆ ಈಗ ಸಂಕಷ್ಟ ಎದುರಾಗಿದೆ. ಪಾಕಿಸ್ತಾನದ ಎರಡನೇ ಅತೀ ದೊಡ್ಡ ನೌಕಾಪಡೆಯ ವಾಯು ನೆಲೆ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ.

ಸ್ವಯಂಚಾಲಿತ ಶಸ್ತ್ರಾಸ್ತ್ರಗಳು, ಗ್ರೇನೆಡ್ ಗಳೊಂದಿಗೆ ಭಯೋತ್ಪಾದಕರು ಟರ್ಬತ್ ನಲ್ಲಿರುವ ಪಾಕ್ ವಾಯುಸೇನಾ ನೆಲೆ ಮೇಲೆ ದಾಳಿ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿ ಉಗ್ರರನ್ನು ಹತ್ಯೆ ಮಾಡಿದ್ದಾರೆ. ಈ ದಾಳಿಯಲ್ಲಿ ಪಾಕ್ ಭದ್ರತಾ ಪಡೆಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

ಭಯೋತ್ಪಾದಕ ದಾಳಿ ನಂತರ ವಾಯುಸೇನಾ ನೆಲೆ ಸುತ್ತ ಭದ್ರತೆ ಹೆಚ್ಚಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಶೋಧ ಕಾರ್ಯಗಳೂ ನಡೆದಿದೆ. ಪಾಕಿಸ್ತಾನ ಈ ವಾಯುಸೇನಾ ನೆಲೆಯಲ್ಲಿ ಚೀನಾದ ಡ್ರೋನ್ ಗಳನ್ನು ಸಹ ಇರಿಸಲಾಗಿತ್ತು.

ಒಟ್ಟು ಆರು ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಈ ಪೈಕಿ ನಾಲ್ವರನ್ನು ಹೊಡೆದುರುಳಿಸಲಾಗಿದೆ. ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ದಾಳಿ ಹೊಣೆಯನ್ನು ಮಜೀದ್ ಬ್ರಿಗೇಡ್ ವಹಿಸಿಕೊಂಡಿದೆ.  ಬಲೂಚಿಸ್ತಾನದಲ್ಲಿ ಚೀನಾ ಮಾಡುತ್ತಿರುವ ಹೂಡಿಕೆಯನ್ನು ಮಜೀದ್ ಬ್ರಿಗೇಡ್ ವಿರೋಧಿಸುತ್ತಿದೆ. ಇದೇ ಕಾರಣಕ್ಕೆ ಈ ದಾಳಿ ನಡೆದಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ