ರಕ್ಷಣಾ ಸಚಿವರನ್ನ ವಜಾಗೊಳಿಸಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ?

ಸೋಮವಾರ, 4 ಸೆಪ್ಟಂಬರ್ 2023 (07:48 IST)
ಕೀವ್ : ಯುದ್ಧಕಾಲದ ರಕ್ಷಣಾ ಸಚಿವ ಓಲೆಕ್ಸಿ ರೆಜ್ನಿಕೋವ್ ಅವರನ್ನು ವಜಾಗೊಳಿಸಿ, ಅವರ ಸ್ಥಾನಕ್ಕೆ ರುಸ್ಟೆಮ್ ಉಮೆರೋವ್ ಅವರನ್ನು ನಾಮನಿರ್ದೇಶನ ಮಾಡಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆದೇಶ ಹೊರಡಿಸಿದ್ದಾರೆ.

ಉಕ್ರೇನ್ ಮೇಲಿನ ರಷ್ಯಾ ಯುದ್ಧವು 19 ನೇ ತಿಂಗಳನ್ನು ಪ್ರವೇಶಿಸಿದೆ. ಈ ಹೊತ್ತಿನಲ್ಲಿ ರಕ್ಷಣಾ ವ್ಯವಸ್ಥೆ ವಿಚಾರವಾಗಿ ಸಚಿವಾಲಯಕ್ಕೆ ಹೊಸ ವಿಧಾನಗಳ ಅಗತ್ಯವಿದೆ ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ.
ಹೊಸ ರಕ್ಷಣಾ ಸಚಿವರಾಗಲು ಉಕ್ರೇನ್ನ ಮಾಜಿ ಪೀಪಲ್ಸ್ ಡೆಪ್ಯೂಟಿ ರುಸ್ಟೆಮ್ ಉಮೆರೊವ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ಝೆಲೆನ್ಸ್ಕಿ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ವೀಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಉಕ್ರೇನ್ನ ರಕ್ಷಣಾ ಸಚಿವರನ್ನು ಬದಲಿಸಲು ನಾನು ನಿರ್ಧರಿಸಿದ್ದೇನೆ. ಮಿಲಿಟರಿ ಮತ್ತು ಸಮಾಜದೊಂದಿಗೆ ಉತ್ತಮ ಪ್ರಮಾಣದಲ್ಲಿ ಸಂವಹನದ ಹೊಸ ವಿಧಾನಗಳು ಮತ್ತು ಇತರ ಸ್ವರೂಪಗಳ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ. 

ಈಗ ರುಸ್ಟೆಮ್ ಉಮೆರೋವ್ ಸಚಿವಾಲಯವನ್ನು ಮುನ್ನಡೆಸಬೇಕು. ಉಕ್ರೇನ್ನ ವರ್ಕೋವ್ನಾ ರಾಡಾ (ಶಾಸಕಾಂಗ) ಈ ವ್ಯಕ್ತಿಯನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಉಮೆರೋವ್ಗೆ ಯಾವುದೇ ಹೆಚ್ಚುವರಿ ಪರಿಚಯಗಳ ಅಗತ್ಯವಿಲ್ಲ. ಸಂಸತ್ತು ಈ ಅಭ್ಯರ್ಥಿಯನ್ನು ಬೆಂಬಲಿಸುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಉಕ್ರೇನ್ ಅಧ್ಯಕ್ಷ ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ