ಚೀನಾ ವಿರುದ್ಧದ ಹೋರಾಟದಲ್ಲಿ ನಾವು ಭಾರತದ ಪರ ಇರುತ್ತೇವೆ ಎಂದ ಅಮೆರಿಕಾ
ಶನಿವಾರ, 13 ಜೂನ್ 2020 (10:19 IST)
ನವದೆಹಲಿ: ಗಡಿಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಿರುವ ಚೀನಾ ವಿರುದ್ಧದ ಭಾರತದ ಹೋರಾಟದಲ್ಲಿ ನಾವು ಕೈಜೋಡಿಸುವುದಾಗಿ ಅಮೆರಿಕಾದ ಉನ್ನತ ರಾಯಭಾರಿ ಅಲೈಸ್ ವೆಲ್ಸ್ ಹೇಳಿದ್ದಾರೆ.
ಜಗತ್ತಿಗೇ ಕೊರೋನಾ ಹರಡಿದ ಚೀನಾ ವಿರುದ್ಧ ಭಾರೀ ಆಕ್ರೋಶಗೊಂಡಿರುವ ಅಮೆರಿಕಾ ಭಾರತಕ್ಕೆ ಬೆಂಬಲ ಸೂಚಿಸುವ ಮೂಲಕ ಈ ಮೊದಲೇ ಚೀನಾಕ್ಕೆ ತಿರುಗೇಟು ನೀಡಿತ್ತು. ಈಗ ಮತ್ತೆ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ.
‘ಗಡಿಯಲ್ಲಿ ಪ್ರಚೋದನಕಾರಿ ನಡೆ ಪ್ರದರ್ಶಿಸಿ ಭಾರತದ ಸಾರ್ವಭೌಮತೆಗೆ ಧಕ್ಕೆ ತರಲು ಯತ್ನಿಸುತ್ತಿರುವ ಚೀನಾ ವಿರುದ್ಧದ ಭಾರತದ ಹೋರಾಟವನ್ನು ನಾವು ಸದಾ ಬೆಂಬಲಿಸುತ್ತೇವೆ’ ಎಂದು ಅಲೈಸ್ ಅಭಿಪ್ರಾಯಪಟ್ಟಿದ್ದಾರೆ.