ನೈಲ್ ಪಾಲಿಶ್ ಆಸೆಗೆ ಬಿದ್ದು ಪ್ರಾಣಾಪಾಯ ಕಳೆದುಕೊಂಡ ಯುವತಿ

Krishnaveni K

ಶುಕ್ರವಾರ, 2 ಫೆಬ್ರವರಿ 2024 (11:51 IST)
ನವದೆಹಲಿ: ನೈಲ್ ಪಾಲಿಶ್ ಹಚ್ಚುವುದು ಎಂದರೆ ಮಕ್ಕಳಿಂದ ಹಿಡಿದು ಮಹಿಳೆಯರವರೆಗೆ ಎಲ್ಲರಿಗೂ ಇಷ್ಟ. ಆದರೆ ಇಲ್ಲೊಬ್ಬ ಯುವತಿ ಕೈ ಉಗುರನ್ನು ಬಣ್ಣಗಳಿಂದ ಅಲಂಕರಿಸಲು ಹೋಗಿ ಗಂಭೀರ ಗಾಯಮಾಡಿಕೊಂಡಿದ್ದಾಳೆ.

ಈ ಘಟನೆ ನೈಲಿ ಪಾಲಿಶ್ ಹಚ್ಚುವವರಿಗೆ ಒಂದು ಪಾಠವೂ ಆಗಲಿದೆ. ಅಮೆರಿಕಾದ ಓಹಿಯೋದಲ್ಲಿ ಈ ದುರ್ಘಟನೆ ಸಂಭವಿಸಿದೆ. ನೈಲ್ ಪಾಲಿಶ್ ಹಚ್ಚಲು ಹೋದ 14 ವರ್ಷದ ಹುಡುಗಿ ನೈಲ್ ಪಾಲಿಶ್ ರಿಮೂವರ್ ಬಾಟಲಿ ಸ್ಪೋಟಗೊಂಡು ಗಂಭೀರ ಗಾಯಗೊಂಡಿದ್ದಾಳೆ ತೀವ್ರ ಸುಟ್ಟಗಾಯಗಳಿಂದಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಗೆ ಕಾರಣವೇನು?
ಮೇಣದ ಬೆಳಕು ಹಚ್ಚಿಟ್ಟು ಹಾಸಿಗೆ ಮೇಲೆ ಕುಳಿತು ನೈಲ್ ಪಾಲಿಶ್ ಬಾಟಲಿ ತೆರೆದು ಬಾಲಕಿ ಕುಳಿತಿದ್ದಳು. ನೈಲ್ ಪಾಲಿಶ್ ಹಚ್ಚುವ ಮೊದಲು ಉಗುರಲ್ಲಿ ಈಗಾಗಲೇ ಇದ್ದ ನೈಲ್ ಪಾಲಿಶ್ ತೆಗೆಯಲು ರಿಮೂವರ್ ಬಾಟಲಿಯನ್ನು ತೆರೆದಿದ್ದಳು. ಈ ವೇಳೆ ಬಾಟಲಿ ಸ್ಪೋಟಗೊಂಡಿದೆ. ಪರಿಣಾಮ ಬಾಲಕಿಯ ದೇಹ, ಕೂದಲು ಸುಟ್ಟುಹೋಗಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಬಾಟಲಿ ಸ್ಪೋಟಿಸಿದ ಪರಿಣಾಮ ಆಕೆ ಕೂತಿದ್ದ ಹಾಸಿಗೆಗೂ ಬೆಂಕಿ ತಗುಲಿಕೊಂಡಿದೆ. ಇದರಿಂದಾಗಿಯೇ ಆಕೆ ಗಂಭೀರ ಗಾಯಗೊಂಡಿದ್ದಾಳೆ. ಇದೀಗ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ನೈಲ್ ಪಾಲಿಶ್ ರಿಮೂವರ್ ನಲ್ಲಿ ಆಲ್ಕೋಹಾಲ್ ಕಂಟೆಂಟ್ ಇರುವುದರಿಂದ ಬೆಂಕಿ ಸಮೀಪವಿಟ್ಟಾಗ ಈ ದುರ್ಘಟನೆ ಸಂಭವಿಸಿದೆ.  ಹೀಗಾಗಿ ನೈಲ್ ಪಾಲಿಶ್ ಹಚ್ಚುವಾಗ ಬೆಂಕಿಯಿಂದ ದೂರವಿದ್ದರೆ ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ