ಯುವರಾಜ್ ಸಿಂಗ್, ಪತ್ನಿ ಕೀತ್ ಹೇಝಲ್ ಫ್ಯಾಮಿಲಿ ಪ್ಲಾನಿಂಗ್!
ಸೋಮವಾರ, 17 ಏಪ್ರಿಲ್ 2017 (05:12 IST)
ಮುಂಬೈ: ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಬ್ರಿಟಿಷ್ ಮೂಲದ ಮಾಡೆಲ್ ಕೀತ್ ಹೇಝಲ್ ಜತೆ ಒಂದು ವಾರದ ಭರ್ಜರಿ ವಿವಾಹವಾಗಿದ್ದರು. ಮದುವೆಯಾದ ಮೇಲೆ ತಮ್ಮ ಫ್ಯಾಮಿಲಿ ಪ್ಲಾನಿಂಗ್ ಏನು ಎಂಬುದನ್ನು ಕೀತ್ ಬಿಚ್ಚಿಟ್ಟಿದ್ದಾರೆ.
ಸದ್ಯ ಯುವಿ ತುಂಬಾ ಬ್ಯುಸಿ. ಪಂದ್ಯ ಮುಗಿಸಿ ಹೋಟೆಲ್ ಕೊಠಡಿಗೆ ಮರಳುವಾಗ ಮಧ್ಯರಾತ್ರಿ ಮೀರಿರುತ್ತದೆ. ಹೀಗಿರುವಾಗ ಪತಿಯನ್ನು ನೋಡುವುದೇ ಅಪರೂಪ. ಹಾಗಿರುವಾಗ ಮಕ್ಕಳ ಮಾತೆಲ್ಲಿ ಬಂತು ಎಂದು ಯುವಿ ಪತ್ನಿ ಅಲವತ್ತುಕೊಂಡಿದ್ದಾರೆ.
ಹಾಗಿದ್ದರೂ, ಅದಕ್ಕೆಲ್ಲಾ ಸಮಯವಿದೆ. ಒಂದು ವೇಳೆ ಗರ್ಭಿಣಿಯಾದರೂ, ಯುವಿ ನನ್ನ ಜತೆಗಿರಬೇಕು. ಸದ್ಯಕ್ಕೆ ನಾವಿಬ್ಬರು ಚೆನ್ನಾಗಿದ್ದೀವಿ. ಅದಕ್ಕಿಂತ ದೊಡ್ಡ ಖುಷಿ ಇನ್ನೇನಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ