ಐಪಿಎಲ್ 13: ಮುಂಬೈ ಬೌಲಿಂಗ್ ಎದುರು ಮಕಾಡೆ ಮಲಗಿದ ಪಂಜಾಬ್ ಬ್ಯಾಟಿಂಗ್

ಶುಕ್ರವಾರ, 2 ಅಕ್ಟೋಬರ್ 2020 (09:14 IST)
ದುಬೈ: ಐಪಿಎಲ್ 13 ರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ 48 ರನ್ ಗಳ ಸೋಲನುಭವಿಸಿದೆ.


ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಪರ ರೋಹಿತ್ ಶರ್ಮಾ 70 ರನ್ ಸಿಡಿಸಿದರೆ ಕೆಳ ಕ್ರಮಾಂಕದಲ್ಲಿ ಕಿರನ್ ಪೊಲ್ಲಾರ್ಡ್ 20 ಎಸೆತಗಳಿಂದ 43, ಹಾರ್ದಿಕ್ ಪಾಂಡ್ಯ 11 ಎಸೆತಗಳಿಂದ 30 ರನ್ ಚಚ್ಚಿ ತಂಡದ ಮೊತ್ತವನ್ನು ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 191 ರನ್ ಗೇರಿಸಿದರು.

ಈ ಮೊತ್ತ ಬೆನ್ನತ್ತಿದ ಪಂಜಾಬ್ ಗೆ ಬ್ಯಾಟಿಂಗ್ ಕೈ ಕೊಟ್ಟಿತು. ಕೆಎಲ್ ರಾಹುಲ್ 17, ಮಯಾಂಕ್ ಅಗರ್ವಾಲ್ 25 ರನ್ ಗೆ ವಿಕೆಟ್ ಒಪ್ಪಿಸಿದರು. ನಿಕಲಸ್ ಪೂರನ್ 27 ಎಸೆತಗಳಲ್ಲಿ 44 ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಹೋರಾಟ ಕಂಡುಬರಲಿಲ್ಲ. ಇದರಿಂದಾಗಿ ಪಂಜಾಬ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಲಷ್ಟೇ ಶಕ್ತವಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ